ನೋಟು ಪರಿವರ್ತನೆ ಪ್ರಕರಣ : ಡಿಕೆಶಿ ಸೇರಿ ಐವರಿಗೆ ಜಾಮೀನು ಮಂಜೂರು

ಅಮಾನ್ಯಗೊಂಡ ನೋಟು ಪರಿವರ್ತನೆಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಪ್ರಕರಣವೊಂದರಲ್ಲಿ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, ಸಂಸದ ಡಿ. ಕೆ. ಸುರೇಶ್ ಸೇರಿದಂತೆ ಐವರಿಗೆ ಹೈಕೋರ್ಟ್ ನಿರೀಕ್ಷಿತ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು :ಅಮಾನ್ಯಗೊಂಡ ನೋಟು ಪರಿವರ್ತನೆಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ  ಪ್ರಕರಣವೊಂದರಲ್ಲಿ  ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್,  ಸಂಸದ ಡಿ. ಕೆ. ಸುರೇಶ್ ಸೇರಿದಂತೆ ಐವರಿಗೆ ಹೈಕೋರ್ಟ್   ನಿರೀಕ್ಷಿತ ಜಾಮೀನು ಮಂಜೂರು ಮಾಡಿದೆ.

ಸಿಬಿಐ ಮುಂದೆ ಏಳು ಬಾರಿ ವಿಚಾರಣೆಗೆ ಸಹಕರಿಸಿದ್ದಾರೆ ಎಂಬ ಆಧಾರದ ಮೇಲೆ ನ್ಯಾಯಾಧೀಶ ಶ್ರೀನಿವಾಸ್ ಹರೀಶ್ ಕುಮಾರ್ ಜಾಮೀನು ಮಂಜೂರು ಮಾಡಿದ್ದಾರೆ.

 ಆರೋಪಿಗಳಾದ ಡಿ. ಕೆ. ಸುರೇಶ್  ಮಾಜಿ ಆಪ್ತ ಸಹಾಯಕ ಬಿ. ಪದ್ಮನಾಭಯ್ಯ, ಡಿ. ಕೆ. ಶಿವಕುಮಾರ್ ಆಪ್ತ ಸಹಾಯಕ  ನಿವೃತ್ತ ಸರ್ಕಾರಿ ಅಧಿಕಾರಿ ಎಸ್. ಶೇಷಗಿರಿ.  ಶಿವನಾಂದ್,  ತಿಮ್ಮಯ್ಯ , ಪದ್ಮರೇಖಾ ಅವರಿಗೂ ಜಾಮೀನು ದೊರಕಿದೆ.

ಜೂನ್ 29 ರಂದು ಸಿಬಿಐ ವಿಶೇಷ ನ್ಯಾಯಾಲಯ  ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ  ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.

ಸಿಬಿಐ ಮೂಲಗಳ ಪ್ರಕಾರ ಬೆಂಗಳೂರಿನ ಎಂಜಿ ರಸ್ತೆಯ ಕಾರ್ಪೋರೇಷನ್ ಬ್ಯಾಂಕಿನಿಂದ ನವೆಂಬರ್ 14, 2016 ರಂದು 12. 25 ಕೋಟಿ ರೂಪಾಯಿಯನ್ನು  ರಾಮನಗರ ಶಾಖೆಗೆ ತಲುಪಿಸಲಾಗಿತ್ತು.
ಅಂದು ಕಾರ್ಯಾಚರಣೆ ಮುಗಿದ ನಂತರ ಸುಮಾರು 10.3 ಲಕ್ಷ ರೂಪಾಯಿ ಹೆಚ್ಚುವರಿ ಹಣ ಕಂಡುಬಂದಿದ್ದು, ಲೆಕ್ಕಕ್ಕೆ ಸಿಕ್ಕುತಿರಲಿಲ್ಲ.  ಬ್ಯಾಂಕ್ ಅಧಿಕಾರಿಗಳು ನಿರ್ವಹಿಸಿದ ದಾಖಲೆಗಳಲ್ಲಿ  ವ್ಯತ್ಯಾಸಗಳು ಕಂಡುಬಂದಿತ್ತು. ಈ ಸಂಬಂಧ ರಾಮನಗರದ ಕಾರ್ಪೋರೇಷನ್ ಬ್ಯಾಂಕ್  ಮುಖ್ಯ ಮ್ಯಾನೇಜರ್  ಬಿ. ಪ್ರಕಾಶ್ ವಿರುದ್ಧ ಏಪ್ರಿಲ್ 7. 2017ರಲ್ಲಿ ಎಫ್ ಐಆರ್ ದಾಖಲಾಗಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com