ಉಡುಪಿ: ಮಲ್ಪೆ ಪಡುಕೆರೆ ಬೀಚ್ ಬಳಿ ದೈತ್ಯ ನೀರಿನ ಅಲೆಗಳು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಮೃತರನ್ನು ನಿತೀಶ್ (29) ಮತ್ತು ನಿಶಾಂತ್ (22) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮೀನುಗಾರಿಕೆಗೆ ಹೋಗಿದ್ದ ಐವರು ತೀರ ಪ್ರದೇಶಕ್ಕೆ ವಾಪಾಸ್ ಬರುತ್ತಿರುವಾಗ ಈ ದುರಂತ ಉಂಟಾಗಿದ್ದು, ಐವರ ಪೈಕಿ ಮೂವರು ಸುರಕ್ಷಿತವಾಗಿದ್ದಾರೆ.
ನಿತೀಶ್ ಮೃತದೇಹವನ್ನು ಪತ್ತೆಯಾಗಿದ್ದು, ಉಡುಪಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ನಿಶಾಂತ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯ ಜನರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿರುವ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.
ನಿತೀಶ್ ಉಡುಪಿಯ ಪಿತ್ರೊಡಿಯ ನಿವಾಸಿಯಾಗಿದ್ದು, ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಈ ಸುದ್ದಿಕೇಳಿ ಕುಟುಂಬ ಸದಸ್ಯರ ರೋಧನ ಮುಗಿಲು ಮಟ್ಟಿತು. ಸಮುದ್ರ ತೀರ ಪ್ರದೇಶದಿಂದ ಕೇವಲ 200 ಮೀಟರ್ ದೂರದಲ್ಲಿ ದೋಣಿ ಇರುವಂತೆಯೇ ಈ ದುರ್ಘಟನೆ ನಡೆದಿದೆ.