ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರ ಹಿಟ್'ಲಿಸ್ಟ್ ನಲ್ಲಿ 34 ಪ್ರಮುಖ ವ್ಯಕ್ತಿಗಳು!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ಹಿಟ್ ಲಿಸ್ಟ್'ನಲ್ಲಿ 34 ಮಂದಿ ಪ್ರಮುಖ ವ್ಯಕ್ತಿಗಳಿರುವುದನ್ನು ಬಹಿರಂಗ ಪಡಿಸಿದ್ದಾರೆ...
ಗೌರಿ ಲಂಕೇಶ್
ಗೌರಿ ಲಂಕೇಶ್
Updated on
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ಹಿಟ್ ಲಿಸ್ಟ್'ನಲ್ಲಿ 34 ಮಂದಿ ಪ್ರಮುಖ ವ್ಯಕ್ತಿಗಳಿರುವುದನ್ನು ಬಹಿರಂಗ ಪಡಿಸಿದ್ದಾರೆ. 
ಹಿಂದೂಗಳ ವಿರುದ್ದ ನಿಲುವನ್ನು ಹೊಂದಿರುವ 34 ಪ್ರಮುಖ ವ್ಯಕ್ತಿಗಳು ಆರೋಪಿಗಳ ಹಿಟ್'ಲಿಸ್ಟ್ ನಲ್ಲಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ವಿಚಾರಣೆ ವೇಳೆ ಆರೋಪಿಗಳು ನೀಡಿರುವ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಹಿಟ್ ಲಿಸ್ಟ್ ನಲ್ಲಿ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಕೂಡ ಇದ್ದರು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 
ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಮುಖ ವ್ಯಕ್ತಿಗಳನ್ನು ಗುರಿ ಮಾಡಿಕೊಳ್ಳಲಾಗಿದ್ದು, ಇತರೆ ರಾಜ್ಯಗಳ ಗಣ್ಯರೂ ಹಿಟ್ ಲಿಸ್ಟ್ ನಲ್ಲಿದ್ದರು. ಅಮೋಲ್ ಕಾಳೆ ಮಾಸ್ಟರ್ ಮೈಂಡ್ ಆಗಿದ್ದು, ತಮ್ಮ ಚಟುವಟಿಕೆಗಳ ಬಗ್ಗೆ ಅಮೋಲ್ ಕಾಳೆ ಅನಾಮಧೇಯ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com