ಪಾಲಿಟೆಕ್ನಿಕ್ ಕಾಲೇಜುಗಳ 2,500 ಅನರ್ಹ ಉಪನ್ಯಾಸಕರಿಗೆ ಲಕ್ಷಗಟ್ಟಲೆ ವೇತನ!

1994ರಿಂದ 2007ರವರೆಗೆ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ನೇಮಕಗೊಂಡ ಸುಮಾರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 1994ರಿಂದ 2007ರವರೆಗೆ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ನೇಮಕಗೊಂಡ ಸುಮಾರು 2,500 ಉಪನ್ಯಾಸಕರು ಹುದ್ದೆಗೆ ಅನರ್ಹರು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.  ಆದರೂ ಅನೇಕರು ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದು ತಿಂಗಳಿಗೆ 1.7 ಲಕ್ಷದಷ್ಟು ವೇತನ ಪಡೆಯುತ್ತಿದ್ದಾರೆ. ಇನ್ನು ನಿವೃತ್ತಿ ಹೊಂದಿದವರು ತಿಂಗಳಿಗೆ 70 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, 1994ರಿಂದ 2007ರವರೆಗೆ ತಾಂತ್ರಿಕ ಶಿಕ್ಷಣದ ರಾಜ್ಯ ಇಲಾಖೆ ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನೇಮಕಾತಿ ಮಾಡಿಕೊಂಡಿತ್ತು. ಆದರೆ ನೇಮಕಾತಿ ಸಂದರ್ಭದಲ್ಲಿ ಕ್ಯಾಡರ್ ಮತ್ತು ನೇಮಕಾತಿ (ಸಿ & ಆರ್) ನಿಯಮವನ್ನು ಪಾಲಿಸಿಲ್ಲ ಎಂದು ತಿಳಿದುಬಂದಿದೆ. ಅಖಿತ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ(ಎಐಸಿಟಿಇ) ಪ್ರಮಾಣದ ವೇತನ ನೀಡಿಕೆಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ನಿಯಮವನ್ನು ಉಲ್ಲಂಘಿಸಿರುವುದು ತಿಳಿದುಬಂದಿದೆ. ಎಐಸಿಟಿಇ ಸೂಚಿಸಿರುವ ಮಾನದಂಡಗಳನ್ನು ಇಲಾಖೆ ಪರಿಗಣಿಸಿಲ್ಲ.

ಎಐಸಿಟಿಇ ವಿವರಿಸಿರುವ ಮಾನದಂಡಗಳನ್ನು ಪರಿಗಣಿಸದಿರುವಾಗ ಆ ಪ್ರಮಾಣದ ವೇತನವನ್ನು ಇಲಾಖೆ ಉಪನ್ಯಾಸಕರಿಗೆ ನೀಡಲು ಹೇಗೆ ಸಾಧ್ಯ? ಇದರರ್ಥ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಎಸ್ಎಸ್ಎಲ್ ಸಿ ಅನುತ್ತೀರ್ಣರಾದವರು ಕೂಡ ಎಐಸಿಟಿಇ ವೇತನವನ್ನು ಪಡೆಯಲು ಅರ್ಹರೆಂದೇ ಎಂದು ಅಧಿಕಾರಿಯೊಬ್ಬರು ಕೇಳುತ್ತಾರೆ.

ಎಐಸಿಟಿ ನೇಮಕಾತಿ ನಿಯಮ ಪ್ರಕಾರ, ತಾಂತ್ರಿಕ ಶಿಕ್ಷಣ ಕಾಲೇಜಿನ ಉಪನ್ಯಾಸಕರಾಗಲು ಗೇಟ್  ಪರೀಕ್ಷೆ ಪಾಸು ಮಾಡುವುದು ಮುಖ್ಯವಾಗುತ್ತದೆ. ಆದರೆ ಪ್ರವೇಶ ಹಂತದಲ್ಲಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಾಗ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಈ ನಿಯಮಗಳನ್ನು ಮುರಿದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಿಕ್ಕಿರುವ ದಾಖಲೆಗಳ ಪ್ರಕಾರ, 1994ರಿಂದ 2007ರವರೆಗೆ ರಾಜ್ಯ ಪಾಲಿಟೆಕ್ನಿಕ್ ಇಲಾಖೆಗೆ ನೇಮಕಗೊಂಡವರು ಯಾರೂ ಗೇಟ್ ಪರೀಕ್ಷೆ ತೇರ್ಗಡೆ ಹೊಂದಿದವರಲ್ಲ. ಕೇವಲ ಗೇಟ್ ಮಾತ್ರವಲ್ಲ, ಎಐಸಿಟಿಇ ವೇತನ ಪ್ರಮಾಣವನ್ನು ಪಡೆಯಲು ಎಂಜಿನಿಯರಿಂಗ್ ನಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಆದರೆ ಇವರಲ್ಲಿ ಅನೇಕರು ಬಿ.ಇಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿಕೊಂಡಿಲ್ಲ ಎಂದು ತಿಳಿದುಬಂದಿದೆ. ಅರ್ಹತೆ ಇರುವ ಉಪನ್ಯಾಸಕರು ಸಿಗುತ್ತಿಲ್ಲವೆಂದು ರಾಜ್ಯ ಸರ್ಕಾರ 2007ರ ನಂತರ ಗೇಟ್ ಪರೀಕ್ಷೆ ಕಡ್ಡಾಯವಾಗಿ ತೇರ್ಗಡೆಯಾಗಬೇಕೆಂಬ ನಿಯಮವನ್ನು ತೆಗೆದುಹಾಕಿ  ಸಿ ಅಂಡ್ ಆರ್ ನಿಯಮದಲ್ಲಿ ತಿದ್ದುಪಡಿ ತಂದಿತು.

ಕ್ಯಾಡರ್ ಅಂಡ್ ರಿಕ್ರೂಟ್ ಮೆಂಟ್ ನಿಯಮ ಪ್ರತಿ 3 ವರ್ಷಗಳಿಗೊಮ್ಮೆ ಬದಲಾವಣೆಯಾಗಬೇಕೆಂದು ಇದ್ದರೂ ಕೂಡ ಅದರಲ್ಲಿ ಭಾರೀ ಹಗರಣ ನಡೆದಿರುವುದು ಪತ್ತೆಯಾಗಿದೆ. ಸಿ ಅಂಡ್ ಆರ್ ನಿಯಮ 2007ರಿಂದ 2018ರವರೆಗೆ 5 ಬಾರಿ ಹೊರಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com