ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು 14 ಲಕ್ಷ ವಂಚನೆ: ಯುವಕನ ಬಂಧನ

ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು ಹೇಳಿ 14 ಲಕ್ಷ ರೂ. ವಂಚಿಸಿದ್ದ ಯುವಕನೊಬ್ಬನನ್ನು ಬೆಂಗಳೂರು ಸುಬ್ರಹ್ಮಣ್ಯ ನಗರ ಪೋಲೀಸರು ಬಂಧಿಸಿದ್ದಾರೆ.
ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು 14 ಲಕ್ಷ ವಂಚನೆ: ಯುವಕನ ಬಂಧನ
ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು 14 ಲಕ್ಷ ವಂಚನೆ: ಯುವಕನ ಬಂಧನ
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು ಹೇಳಿ 14 ಲಕ್ಷ ರೂ. ವಂಚಿಸಿದ್ದ ಯುವಕನೊಬ್ಬನನ್ನು ಬೆಂಗಳೂರು ಸುಬ್ರಹ್ಮಣ್ಯ ನಗರ ಪೋಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೆ.ಮಂಜುನಾಥ್ ಎಂದು ಗುರುತಿಸಲಾಗಿದೆ. ಈತ ನಾನು ಡಿಕೆ ಶಿವಕುಮಾರ್ ಕಛೇರಿಯಲ್ಲಿ ಶಾಖಾಧಿಕಾರಿ. ಸಚಿವರಿಗೆ ಆಪ್ತ ಎಂದು ಹೇಳಿಕೊಂಡಿದ್ದು ಕಂದಾಯ ಇಲಾಖೆಯಲ್ಲಿಕೆಪಿಎಸ್​ಸಿ ಮೆಂಬರ್​ ಕೋಟಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಹಣ ವಂಚಿಸಿದ್ದಾನೆ.
ಪ್ರಕರಣ ಏನು? 
ಮಂಜುನಾಥ್ ತಾನು ಕಂದಾಯ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ, ನಾನು ಸಚಿವ ಡಿಕೆಶಿ ಅವರಿಗೆ ಆಪ್ತನಾಗಿದ್ದೇನೆಂದು ನಂಬಿಸಿ ಕೋಲಾರ ಜಿಲ್ಲೆ ಶ್ರೀನಿವಾಸಪುರದ ವೆಂಕಟೇಶ್ ಎನ್ನುವವರಿಂದ 14 ಲಕ್ಷ ಪಡೆದಿದ್ದಾನೆ. ಈ ಬಳಿಕ ವೆಂಕಟೇಶ್ ಅವರಿಗೆ ತಾನೇ ತಯಾರಿಸಿದ ನಕಲಿ ನೇಮಕಾತಿ ಪತ್ರವನ್ನು ರವಾನಿಸಿದ್ದಾನೆ.
ಈ ಪತ್ರದೊಡನೆ ಕೆಪಿಎಸ್​ಸಿ ಗೆ ಆಗಮಿಸಿ ಅಲ್ಲಿ ವಿಚಾರಿಸಿದ ವೆಂಕಟೇಶ್ ಅವರಿಗೆ ಆಘಾತ ಕಾದಿತ್ತು. ಕಛೇರಿ ಸಿಬ್ಬಂದಿಯು ಇದು ತಾವು ಕಳಿಸಿದ ಪತ್ರವೇ ಅಲ್ಲ ಎಂದಿದ್ದಾರೆ.
ನಿರಾಶರಾದ ವೆಂಕಟೇಶ್ ತಾನು ವಂಚನೆಗೊಳಗಾಗಿದ್ದನ್ನು ಅರಿತು ವಂಚಕ ಮಂಜುನಾಥ್ ಗೆ ಹಣ ಹಿಂತಿರುಗಿಸಲು ಕೇಳಿದ್ದಾರೆ. ಮೊದಲಿಗೆ ಹಣ ಹಿಂದಿರುಗಿಸುವುದಕ್ಕೆ ನಿರಾಕರಿಸಿದ ಆರೋಪಿ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಮೋಸ ಹೋದ ವೆಂಕಟೇಶ್ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೊಪಿಯನ್ನು ಬಂಧಿಸಿದ ಪೋಲೀಸರು ಆತ ಇನ್ನೂ ಎಷ್ಟು ಜನರಿಗೆ ಹೀಗೆ ವಂಚಿಸಿದ್ದಾನೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com