ಮೋದಿ ಸರ್ಕಾರ ನಮ್ಮ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ: ಪೇಜಾವರ ಶ್ರೀ

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಿಲ್ಲ. ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಹೇಳಿದ್ದಾರೆ.
ಪೇಜಾವರ ಶ್ರೀ
ಪೇಜಾವರ ಶ್ರೀ
Updated on
ಉಡುಪಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಿಲ್ಲ. ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಹೇಳಿದ್ದಾರೆ.
"ಮೋದಿ ನಾಯಕತ್ವದ ಸರ್ಕಾರದ ಮೇಲೆ ಬಹಳ ನಿರೀಕ್ಷೆಗಳಿತ್ತು. ಆದರೆ ಅವರು ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಲು ವಿಫಲರಾಗಿದ್ದಾರೆ "ಶುಕ್ರವಾರ ಸುದ್ದಿಗರರೊಂದಿಗೆ ಪೇಜಾವರ ಶ್ರೀಗಳು ಮಾತನಾಡಿದ್ದಾರೆ.
ದೇಶದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದೆ ಆದರೆ ಕಪ್ಪುಹಣವನ್ನು ವಿದೇಶದಿಂದ ತರದೇ ಹೋಗಿರುವುದು,  ಗಂಗಾ ಶುದ್ಧೀಕರಣ ಆಗದಿರುವುದು ಸರ್ಕಾರದ ಹಿನ್ನೆಡೆಗೆ ಕಾರಣ ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆ ಈಡೇರಿಸದೆ ಇರುವುದಾಗಲಿ, ವಿಪಕ್ಷಗಳೆಲ್ಲಾ ಸೇರಿ ಮೈತ್ರಿಕೂಟ ರಚನೆಗೆ ಮುಂದಾಗಿರುವುದಾಗಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗಂಗಾ ನದಿ ನಿರು ಶುದ್ದೀಕರಣವಾಗಬೇಕಾಗಿರುವುದು ಇಂದಿನ ಅಗತ್ಯ. ಎಂದು ಶ್ರೀಗಳು ಒತ್ತಿ ಹೇಳಿದ್ದು ಶ್ರೀರಾಮಮಂದಿರ ನಿರ್ಮಾಣಕ್ಕೆ ಮುನ್ನ ಈ ಕೆಲಸವಾಗಬೇಕು ಎಂದಿದ್ದಾರೆ.
ರೆಸಾರ್ಟ್ ರಾಜಕೀಯಕ್ಕೆ ಬೇಸರ
ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಬೇಸರ ತರಿಸಿದೆ, ರೆಸಾರ್ಟ್, ಆಪರೇಷನ್ ನಲ್ಲಿ ಜನಪ್ರತಿನಿಧಿಗಳು ತಲ್ಲೀನರಾಗಿದ್ದಾರೆ. ಯಾವ ರಾಜಕೀಯ ಪಕ್ಷಗಳು ಸಹ ನೈತಿಕತೆ ಉಳಿಸಿಕೊಂಡಿಲ್ಲ. ಎಂದು ಶ್ರೀಗಳು ಅಸಮಾಧಾನ ತೋರಿದ್ದಾರೆ.
ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಹೋದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಹೊಗುವ ಬದಲು ಸರ್ವಪಕ್ಷಗಳ ಆಡಲಿತ ಜಾರಿಗೆ ತರಬೇಕು ಎನ್ನುವುದು ನನ್ನ ಅನಿಸಿಕೆ.  ನಾನು ಯಾವ ಪಕ್ಷದ ಪರವೂ ಇಲ್ಲ. ಒಳ್ಳೆಯ ಕೆಲಸ ಮಾಡಿದವರನ್ನು ಬೆಂಬಲಿಸುತ್ತೇನೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬ ಅನುಭವಿ ರಾಜಕಾರಣಿದ್ದು,ಅವರು ಪೂರ್ಣಾವಧಿ ಆಡಳಿತ ನಡೆಸಲೆಂದು ನಾನು ಹಾರೈಸುತ್ತೇನೆ ಎಂದ ಶ್ರೀಗಳು ಶುಭಾಶೀರ್ವಾದ ಮಾಡಿದ್ದಾರೆ.
ಈ ಬಾರಿಯೂ ಇಫ್ತಾರ್‌ ಕೂಟ
ಈ ಬಾರಿ ಸಹ ಮಠದಲ್ಲಿ ಇಫ್ತಾರ್‌ ಕೂಟ ಆಯೋಜಿಸಲು ನಾನು ಉತ್ಸುಕನಾಗಿದ್ದೇನೆ. ಆದರೆ ಮುಸ್ಲಿಮರೇ ಆಸಕ್ತಿ ತೋರುತ್ತಿಲ್ಲ. ಕಳೆದ ಬಾರಿ ಭಾರೀ ವಿವಾದಗಳುಂಟಾಗಿದ್ದ ಕಾರಣ ಅವರು ಹಿಂಜರಿಯುತ್ತಿದ್ದಾರೆ. ಮೂರ್ತಿಪೂಜೆ ನಡೆಯುವಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ.  ಎಂದು ಪೇಜಾವರ ಶ್ರೀಗಳು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com