ಕಬ್ಬಿನ ಇಳುವರಿ ಸುಧಾರಿಸಲು ಉತ್ತರ ಪ್ರದೇಶ ಮಾದರಿ ಅಳವಡಿಕೆ: ಅಜಯ್ ನಾಗಭೂಷಣ್

ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಉತ್ತರ ಪ್ರದೇಶದ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಉತ್ತರ ಪ್ರದೇಶದ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಮಾನಸ ಗಂಗೋತ್ರಿಯ ರಾಣಿಬಹದ್ದೂರ್‌ ಸಭಾಂಗಣದಲ್ಲಿ ದಕ್ಷಿಣ ಕರ್ನಾಟಕದ ಕಬ್ಬು ತಳಿ ಸಂಶೋಧನೆ ಮತ್ತು ಅಭಿವೃದ್ಧಿ ನಿರತರ 21ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಒಟ್ಟು 4 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯುವ ಜಮೀನಿಂದ ಕೇವಲ ಶೇ.50 ರಷ್ಟು ಮಾತ್ರ ಮಾತ್ರ ಇಳುವರಿ ತೆಗೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಉಳಿದ 2 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಉತ್ತರ ಪ್ರದೇಶದ ಮಾದರಿ ಅನುಸರಿಸಿ ಕಬ್ಬು ಬೆಳೆಯಲಾಗುವುದು, ಇದನ್ನು ಅನುಸರಿಸಿದರೇ, ಶೇ.1.5 ರಷ್ಟು, ಇಳುವರಿ ಏರಿಕೆಯಾಗುವುದು, ಕರ್ನಾಟಕದಲ್ಲಿ ಇದರ ಪ್ರಮಾಣ ಶೇ,ರಷ್ಟು ಏರಿಕೆಯಾಗುವ  ಸಾದ್ಯತೆಯಿದೆ ಎಂದು ನಾಗಝೂಷಣ್ ತಿಳಿಸಿದ್ದಾರೆ,
ಆರಂಭದಲ್ಲಿ 20 ಸಾವಿರ ಹೆಕ್ಟರ್ ಗೆ ಬಿತ್ತನೆ ಬೀಜ ಸಿದ್ಧಪಡಿಸಲಾಗವುದು, ನಂತರ ನಿಧಾನವಾಗಿ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪರಿಚಯಿಸಿರುವ ಹೊಸ ಮಾದರಿಯ ಕಬ್ಬಿನ ಬಿತ್ತನೆ ಬೀಜದಿಂದ ಬೆಳೆ ಉತ್ತಮವಾಗಿ ಬರುತ್ತಿದೆ  ಎಂದು ಕೊಯಂಬೂತ್ತೂರಿ ಕಬ್ಬು ಬಿತ್ತನೆ ಬೀಜ ಸಂಸ್ಥೆಯ ನಿರ್ದೇಶಕ ಡಾ. ಭಕ್ಷಿರಾಮ್ ತಿಳಿಸಿದ್ದಾರೆ.
ಪ್ರತಿ ಹೆಕ್ಟೇರ್ ಗೆ  77 ಟನ್ ಕಬ್ಬು ಇಳುವರಿ ಬರುತ್ತಿದೆ, 20.8 ಟನ್ ಇದ್ದದ್ದು, 36 ಲಕ್ಷ ಟನ್ ಗೆ ಏರಿದೆ, ಮೊದಲಿಗಿಂತ ಈಗ ಇಳುವರಿ ಬರುತ್ತಿದೆ.ರ್ನಾಟಕದಲ್ಲಿ ಕಬ್ಬು ಬೆಳೆಯುವ ಪ್ರದೇಶದಲ್ಲಿ ಶೇ. 5ಕ್ಕಿಂತ ಕಡಿಮೆ ಪ್ರದೇಶ ಹನಿ ನೀರಾವರಿಗೆ ಒಳಪಟ್ಟಿದೆ. ತಂತ್ರಜ್ಞಾನ ಮುಂದುವರಿದಿದೆ. ಅದಕ್ಕಾಗಿ ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತರಿಗೆ ತಿಳಿವಳಿಕೆ ನೀಡುವುದು ಅವಶ್ಯವಾಗಿದೆ,'' ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com