ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗಣಿಗಾರಿಕೆ ಸಂಸ್ಥೆಗಳಿಗೆ ಮುಚ್ಚುವ ಭೀತಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಒಂದು ಕಿಲೋಮೀಟರ್ ಒಳಗಡೆ ಸ್ಥಾಪಿತವಾಗಿರುವ 10ಕ್ಕೂ ಹೆಚ್ಚು ಗಣಿ ಕಂಪನಿಗಳ ಗುತ್ತಿಗೆಯನ್ನುಅಮಾನತುಪಡಿಸುವಂತೆ ಅರಣ್ಯ ಇಲಾಖೆ ಶಿಫಾರಸ್ಸಿನಂತೆ ಗಣಿ ಮತ್ತು ಭೂ ವಿ ಜ್ಞಾನ ಇಲಾಖೆ ಈ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ  ಒಂದು ಕಿಲೋಮೀಟರ್ ಒಳಗಡೆ  ಸ್ಥಾಪಿತವಾಗಿರುವ  10ಕ್ಕೂ ಹೆಚ್ಚು ಗಣಿ ಕಂಪನಿಗಳ ಗುತ್ತಿಗೆಯನ್ನು  ರದ್ದುಪಡಿಸುವಂತೆ ಅರಣ್ಯ ಇಲಾಖೆ ನೀಡಿರುವ ಶಿಫಾರಸ್ಸಿನಂತೆ ಈ ಕಂಪನಿಗಳನ್ನು ಮುಚ್ಚುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

ರಾಷ್ಟ್ರೀಯ ಉದ್ಯಾನವನ , ಹುಲಿ ಸಂರಕ್ಷಿತ ಪ್ರದೇಶದ 10 ಕಿಲೋ ಮೀಟರ್  ವ್ಯಾಪ್ತಿಯೊಳಗೆ  ಯಾವುದೇ  ಗಣಿಗಾರಿಕೆ ಚಟುವಟಿಕೆ ನಡೆಸುವಂತಿಲ್ಲ ಎಂಬ ಅರಣ್ಯ ಮತ್ತು ಪರಿಸರ ಸಚಿವಾಲಯದ  ಆದೇಶದಂತೆ  ಏಪ್ರಿಲ್ 26 ರಂದು ಐದು ಕಲ್ಲು ಗಣಿಗಾರಿಕೆಯ  ಕಂಪನಿಗಳ ಕಾರ್ಯವನ್ನು  ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಥಗಿತಗೊಳಿಸಿದೆ.

ಗಣಿ ಕಂಪನಿ ಮುಚ್ಚುವ  ನಿರ್ಧಾರದ ವಿರುದ್ಧ ಐದು ಕಂಪನಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿವೆ.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆ  15 ಗಣಿ ಗುತ್ತಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸಿದ್ದು, 10 ಕಿಲೋ ಮೀಟರ್ ಒಳಗಡೆ ಇವುಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.
ಅರಣ್ಯ ಇಲಾಖೆ ವರದಿ ಅನ್ವಯ  ಐದು ಕಂಪನಿಗಳ ವಿರುದ್ಧ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು  ಭೂ ವಿಜ್ಞಾನ ಇಲಾಖೆ ನಿರ್ದೇಶಕ ಎನ್. ಎಸ್. ಪ್ರಸನ್ನ ಕುಮಾರ್    ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com