ದಾರವಾಡ: ಉನ್ನತ ಶಿಕ್ಷಣಕ್ಕೆ ನಕಾರ ಕಾಂಗ್ರೆಸ್ ನಾಯಕನ ಪುತ್ರಿ ನೇಣಿಗೆ ಶರಣು

ಉನ್ನತ ಶಿಕ್ಷಣ ಪಡೆಯಲು ಮನೆಯವರು ನಿರಾಕರಿಸಿದ್ದಕ್ಕೆ ಮನನೊಂದು ಕಾಂಗ್ರೆಸ್ ನಾಯಕರೊಬ್ಬರ ಮಗಳು ನೇಣಿಗೆ ಶರಣಾದ ಘಟನೆ ಧಾರವಡದಲ್ಲಿ ನಡೆದಿದೆ.
ದಾರವಾಡ: ಉನ್ನತ ಶಿಕ್ಷಣಕ್ಕೆ ನಕಾರ ಕಾಂಗ್ರೆಸ್ ನಾಯಕನ ಪುತ್ರಿ ನೇಣಿಗೆ ಶರಣು
ದಾರವಾಡ: ಉನ್ನತ ಶಿಕ್ಷಣಕ್ಕೆ ನಕಾರ ಕಾಂಗ್ರೆಸ್ ನಾಯಕನ ಪುತ್ರಿ ನೇಣಿಗೆ ಶರಣು
Updated on: 
ಧಾರವಾಡ: ಉನ್ನತ ಶಿಕ್ಷಣ ಪಡೆಯಲು ಮನೆಯವರು ನಿರಾಕರಿಸಿದ್ದಕ್ಕೆ ಮನನೊಂದು ಕಾಂಗ್ರೆಸ್ ನಾಯಕರೊಬ್ಬರ ಮಗಳು ನೇಣಿಗೆ ಶರಣಾದ ಘಟನೆ ಧಾರವಡದಲ್ಲಿ ನಡೆದಿದೆ.
ಹಿರಿಯ ಕಾಂಆಗ್ರೆಸ್ ನಾಯಕರಾದ ಶಿವಶಂಕರ ಹಂಪಣವರ ಪುತ್ರಿ ಪೂರ್ಣಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡದ ಶಹರದ ಚರಂತಿಮಠ ಗಾರ್ಡನ ನಿವಾಸಿಯಾಗಿದ್ದ ಈಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಉದ್ಯಮಿ, ಕಾಂಗ್ರೆಸ್ ನಾಯಕರೂ ಆದ ಶಿವಶಂಕರ ಹಂಪಣ್ಣವರ ಮಗಳು ಪೂರ್ಣಿಮಾ ಉನ್ನತ ಶಿಕ್ಷಣ ಪಡೆಯುವದಕ್ಕಾಗಿ ಬೆಂಗಳೂರಿಗೆ ತೆರಳಲು ಇಚ್ಚಿಸಿದ್ದರು. ಆದರೆ ಮನೆಯವರ ಪ್ರೀತಿಯ ಮಗಳಾದ ಇವಳನ್ನು ಬೆಂಗಳೂರಿಗೆ ಕಳಿಸಲು ಪೋಷಕರು ನಿರಾಕರಿಸಿದ್ದಾರೆ.  ಇದರಿಂದ ಮನ ನೊಂದ ಆಕೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎನ್ನಲಾಗಿದೆ.
ಘಟನೆ ಕುರಿತಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com