
ಬೆಂಗಳೂರು: ನಟ ರಜನಿಕಾಂತ್ ಅಭಿನಯದ ಕಾಳ ಚಿತ್ರ ಬಿಡುಗಡೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ರಜನಿಕಾಂತ್ ಅವರ ಪುತ್ರಿ ಮತ್ತು ಅಳಿಯ ಚೆನ್ನೈ ಮೂಲದ ವುಂಡರ್ ಬಾದ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಮತ್ತು ಪ್ರದರ್ಶನಕ್ಕೆ ರಕ್ಷಣೆ ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಮತ್ತು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಅವರಿಗೆ ಆದೇಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಧನುಷ್ ತಮ್ಮ ಮನವಿ ಅರ್ಜಿಯಲ್ಲಿ, ಕಾಲ ಚಿತ್ರ ಬಿಡುಗಡೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿನ ಸದ್ಯದ ಪರಿಸ್ಥಿತಿಯಿಂದಾಗಿ ಚಿತ್ರ ಬಿಡುಗಡೆಗೆ ಪೊಲೀಸ್ ಮುಖ್ಯಸ್ಥರು ಬೆಂಬಲ ನೀಡುವಂತೆ ಕಾಣುತ್ತಿಲ್ಲ. ಚಿತ್ರ ಬಿಡುಗಡೆಯಾದರೆ ಸಂಬಂಧಪಟ್ಟವರಿಗೆಸ ಮತ್ತು ಚಿತ್ರ ವೀಕ್ಷಿಸಲು ಹೋಗುವವರಿಗೆ ರಕ್ಷಣೆ ಸಿಗುವಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಕಾಳ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಬಂಧ ವಿಧಿಸಿದೆ. ಚಿತ್ರ ಬಿಡುಗಡೆಗೆ ಮತ್ತು ವಿತರಣೆಗೆ ನಿಷೇಧ ಹೇರಿ ಹೇಳಿಕೆ ಹೊರಡಿಸಿದೆ.
Advertisement