• Tag results for ರಜನಿಕಾಂತ್

ಮತ್ತೆ ಅಧಿಕಾರಕ್ಕೆ ಬರುವುದನ್ನು ಮರೆತುಬಿಡಿ: ಮದ್ಯದಂಗಡಿ ತೆರೆದಿದ್ದಕ್ಕೆ ತಮಿಳು ನಾಡು ಸರ್ಕಾರ ವಿರುದ್ಧ ರಜನಿಕಾಂತ್ ಕಿಡಿ

ತಮಿಳು ನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕಿಡಿಕಾರಿದ್ದಾರೆ.

published on : 10th May 2020

ಕೊರೋನಾ ವೈರಸ್: ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕ ವರ್ಗಕ್ಕೆ ರೂ.50 ಲಕ್ಷ ದೇಣಿಗೆ ನೀಡಿದ ರಜನಿಕಾಂತ್

ದೇಶದಾದ್ಯಂತ ಕೊರೋನಾ ವೈರಸ್ ರುದ್ರ ತಾಂಡವವಾಡುತ್ತಿದ್ದು, ವೈರಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ತಮಿಳುನಾಡು ಸರ್ಕಾರ ಇಡೀ ರಾಜ್ಯವನ್ನು ಬಂದ್ ಮಾಡಿದೆ. ಬಂದ್ ನಿಂದಾಗಿ ಸಿನಿಮಾಮ ಕಾರ್ಮಿಕ ವರ್ಗ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು, 50 ಲಕ್ಷ ದೇಣಿಗೆ ನೀಡಿದ್ದಾರೆ. 

published on : 24th March 2020

ಸಿಎಂ ಸ್ಥಾನದ ಬಗ್ಗೆ ಎಂದಿಗೂ ಚಿಂತಿಸಿಲ್ಲ, ರಾಜಕೀಯ ಬದಲಾವಣೆಯಷ್ಟೇ ನನ್ನ ಇಚ್ಛೆಯಾಗಿತ್ತು: ರಜನಿಕಾಂತ್

ರಾಜ್ಯದ ಮುಖ್ಯಮಂತ್ರಿ ಸ್ಥಾನದಬಗ್ಗೆ ಎಂದಿಗೂ ಚಿಂತಿಸಿರಲಿಲ್ಲ, ರಾಜಕೀಯ ಬದಲಾಗಬೇಕೆಂಬುದೇ ನನ್ನ ಇಚ್ಛೆ ಎಂದು ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಅವರು ಹೇಳಿದ್ದಾರೆ. 

published on : 12th March 2020

ದೇಶದಲ್ಲಿ ಶಾಂತಿ ಕಾಪಾಡಲು ಯಾವುದೇ ಪಾತ್ರ ವಹಿಸಲು ನಾನು ಸಿದ್ಧ: ರಜನಿಕಾಂತ್

ಎರಡು ದಿನಗಳ ಹಿಂದಷ್ಟೇ ದೆಹಲಿ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು, ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ತಾನು ಯಾವುದೇ ಪಾತ್ರ ವಹಿಸಲು ಸಿದ್ಧ ಎಂದು ಭಾನುವಾರ ಹೇಳಿದ್ದಾರೆ.

published on : 2nd March 2020

ಕಠಿಣ ಕ್ರಮ ಕೈಗೊಳ್ಳಲಾಗದಿದ್ದರೆ ರಾಜೀನಾಮೆ ನೀಡಿ: ಕೇಂದ್ರ ಸರ್ಕಾರಕ್ಕೆ ರಜನಿಕಾಂತ್ ತರಾಟೆ  

ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಗಲಭೆ ಸ್ವರೂಪ ಪಡೆದು 24 ಜನರು ಬಲಿಯಾಗಿರುವ ವಿಷಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

published on : 26th February 2020

'ರಜನಿ v/s ವೈಲ್ಡ್' ಸದ್ಯದಲ್ಲಿಯೇ ಡಿಸ್ಕವರಿ ಚಾನೆಲ್ ನಲ್ಲಿ: ತಲೈವಾ ಅಭಿಮಾನಿಗಳಿಗೆ ಸಿಹಿಸುದ್ದಿ 

ಇದು ತಲೈವಾ, ರಜನಿಕಾಂತ್ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಸಾಹಸಿ ಬೇರ್ ಗ್ರಿಲ್ಸ್ ಡಿಸ್ಕವರಿ ಚಾನೆಲ್ ಗೆ ನಡೆಸಿಕೊಡುವ ಪ್ರಖ್ಯಾತ ಟಿ ವಿ ಶೋ 'ಇಂಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ನಲ್ಲಿ ರಜನಿಕಾಂತ್ ಭಾಗವಹಿಸಿದ ಸರಣಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ.

published on : 19th February 2020

ಏಪ್ರಿಲ್‌ನಲ್ಲಿ ನೂತನ ಪಕ್ಷ ಪ್ರಾರಂಭಿಸಲಿರುವ ಸೂಪರ್ ಸ್ಟಾರ್ ರಜನಿಕಾಂತ್ 

ದಕ್ಷೀಣ ಭಾರತ ಚಿತ್ರರಂಗದ ಮೇರುನಟ ರಜನಿಕಾಂತ್ ಏಪ್ರಿಲ್‌ನಲ್ಲಿ ತಮ್ಮ ನೂತನ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ.  ಡಿಸೆಂಬರ್ 31, 2017 ರಂದು ರಜಿನಿ ಮಕ್ಕಳ್ ಮಂದ್ರಮ್ ನ ಘೋಷಣೆಯಾದ ಸುಮಾರು ಎರಡು ವರ್ಷಗಳ ನಂತರ ನಟ ಹಾಗೂ ಅವರ ನಿಕಟವರ್ತಿಗಳು ಏಪ್ರಿಲ್ ಗೆ ನೂತನ ಪಕ್ಷ ಪ್ರಾರಂಭಿಸುವುದಾಗಿ ಖಚಿತಪಡಿಸಿದ್ದಾರೆ.

published on : 9th February 2020

#ಸಿಎಎಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ, ಹೊರಗಿನವರ ಪತ್ತೆ ಮಾಡಲು ಎನ್ ಪಿಆರ್ ಬಹುಮುಖ್ಯ: ರಜನಿಕಾಂತ್

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿರುವಂತೆಯೇ ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಇದಕ್ಕೆ ಪ್ರತಿಕ್ರಿಯೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

published on : 5th February 2020

ಸಾಹಸ ಪ್ರದರ್ಶನ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಮರೆಯಲಾಗದ ಅನುಭವ: ಸೂಪರ್ ಸ್ಟಾರ್ ರಜನಿಕಾಂತ್ 

ಸೂಪರ್ ಸ್ಟಾರ್ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರು. ನಾಲ್ಕು ದಶಕಗಳ ಹಿಂದೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಯಶಸ್ಸು ಕಂಡವರು. ಇದೀಗ ಸಾಹಸ ಪ್ರದರ್ಶನ ಮೂಲಕ ಕಿರುತೆರೆಗೆ ಸಹ ಕಾಲಿಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಜನಿಕಾಂತ್ ಅವರೇ ಮಾತನಾಡಿದ್ದಾರೆ.

published on : 29th January 2020

ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣ ವೇಳೆ ರಜನಿಕಾಂತ್ ಗೆ ಗಾಯವಾಗಿಲ್ಲ, ಪರಚಿದ್ದಷ್ಟೇ: ಅರಣ್ಯಾಧಿಕಾರಿಗಳ ಸ್ಪಷ್ಟನೆ 

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ಪ್ರದೇಶಗಳಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಗೆ ಸಣ್ಣಪುಟ್ಟ ಪರಚಿದ ಗಾಯಗಳಾಗಿವೆಯಷ್ಟೇ, ಬೇರೇನೂ ತೊಂದರೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

published on : 29th January 2020

ಬಂಡೀಪುರ: ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣದ ವೇಳೆ ರಜನಿಕಾಂತ್ ಗೆ ಗಾಯ; 

ಬಂಡೀಪುರ ರಾಷ್ಟ್ರಿಯ ಉದ್ಯಾನವನದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ರಜನಿಕಾಂತ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. 

published on : 28th January 2020

ಬಂಡೀಪುರ ಅರಣ್ಯದಲ್ಲಿ ರಜನಿಕಾಂತ್: ಬೇರ್ ಗ್ರಿಲ್ಸ್ ಜೊತೆ 'ಮ್ಯಾನ್ ವರ್ಸಸ್ ವೈಲ್ಡ್ ’ಸಾಕ್ಷ್ಯಚಿತ್ರದಲ್ಲಿ ಭಾಗಿ 

ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕ, ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

published on : 28th January 2020

ರಜನಿಕಾಂತ್ ಹೇಳಿಕೆ ಬೆನ್ನಲ್ಲೇ ತಮಿಳುನಾಡಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸ

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸಲವಕ್ಕಂ ಎಂಬಲ್ಲಿ ತಮಿಳು ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಪುತ್ಥಳಿಯನ್ನು ಭಗ್ನಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. 

published on : 25th January 2020

ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ- ರಜನಿ ಕಾಂತ್ 

ಸಮಾಜ ಸುಧಾರಕ ಪರಿಯಾರ್ ಇವಿ ರಾಮಸ್ವಾಮಿ ಕುರಿತ ಹೇಳಿಕೆಗೆ ವಿಷಾಧ ಅಥವಾ ಕ್ಷಮೆಯಾಚಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿ ಕಾಂತ್ ಸ್ಪಷ್ಟಪಡಿಸಿದ್ದಾರೆ.

published on : 21st January 2020

ಕನ್ನಡದಲ್ಲೇ ರಜನಿ 'ದರ್ಬಾರ್' ಗೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಸೂಪರ್ ಸ್ಟಾರ್ ರಜನಿಕಾಂತ್ ಅವರ ದರ್ಬಾರ್ ಸಿನಿಮಾಗೆ ಮತ್ತೆ ವಿಘ್ನ ಎದುರಾಗಿದ್ದು, ಕನ್ನಡದಲ್ಲಿ ಮಾತ್ರ ದರ್ಬಾರ್ ಚಿತ್ರ ಕರ್ನಾಟಕದಲ್ಲಿ ತೆರೆಕಾಣಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

published on : 9th January 2020
1 2 3 >