

ಚೆನ್ನೈ: ಇಂದು ಡಿಸೆಂಬರ್ 12, ಸೂಪರ್ ಸ್ಟಾರ್ ರಜನಿಕಾಂತ್ ಅವರ 75 ನೇ ಹುಟ್ಟುಹಬ್ಬವನ್ನು ಆಚರಿಸಿದ್ದಲ್ಲದೆ, ಸಿನಿಮಾದಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಅವರ ಅಭಿಮಾನಿಗಳಿಗೆ ಇದು ಡಬಲ್ ಸಂಭ್ರಮವಾಗಿದೆ.
ಇಂದು ತಮಿಳುನಾಡು ಮತ್ತು ಅದರಾಚೆಗೆ ಹಬ್ಬದ ವಾತಾವರಣ ಕಂಡುಬಂತು. ರಜನಿಕಾಂತ್ ಅಭಿನಯದ ವಿಶೇಷ ಚಲನಚಿತ್ರಗಳ ಮರು ಬಿಡುಗಡೆಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಥೀಮ್ ಪಾರ್ಟಿಗಳು ಮಧ್ಯರಾತ್ರಿಯಿಂದ ನಡೆದವು. ದೊಡ್ಡ ಪರದೆ ಮೇಲೆ ಅರ್ಧ ಶತಮಾನ ಪೂರೈಸಿದ ನಟನ ಸಾಧನೆಗಳನ್ನು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಮೆಲುಕು ಹಾಕಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ರಾಜಕೀಯ ನಾಯಕರು ತಮ್ಮ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ತಿಳಿಸಿದ್ದಾರೆ.
“ರಜನಿಕಾಂತ್ = ವಯಸ್ಸಿನ ಮೇಲೆ ಜಯಗಳಿಸುವ ಮೋಡಿ,” ಎಂದು ಮುಖ್ಯಮಂತ್ರಿ ಬರೆದಿದ್ದಾರೆ, “ಆರರಿಂದ ಅರವತ್ತರವರೆಗೆ ಅರ್ಧ ಶತಮಾನದಿಂದ ಪ್ರೇಕ್ಷಕರನ್ನು ಆಕರ್ಷಿಸಿದ ನನ್ನ ಸ್ನೇಹಿತ” ಎಂದು ಹಾರೈಸಿದರು. ಅವರಿಂದ ಇನ್ನೂ ಹೆಚ್ಚು ಯಶಸ್ವಿ ಚಿತ್ರಗಳು ಹೊರಹೊಮ್ಮಲಿ, ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ಅವರ ವಿಜಯದ ಧ್ವಜವನ್ನು ಎತ್ತರಕ್ಕೆ ಹಾರಿಸಲಿ ಎಂದು ಹಾರೈಸಿದ್ದಾರೆ.
ಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ರಜನಿಕಾಂತ್ ಅವರನ್ನು ತಮಿಳು ಚಿತ್ರರಂಗದ ಅಚಲ ಸಾರ್ವಭೌಮ ಎಂದು ಶ್ಲಾಘಿಸಿದರು. ಸೂಪರ್‌ಸ್ಟಾರ್‌ನ ಟ್ರೇಡ್ ಮಾರ್ಕ್ ಸ್ಟೈಲ್, ಮ್ಯಾನರಿಸಂನ್ನು ಅಭಿಮಾನಿಗಳು ಹಬ್ಬದ ರೀತಿ ಕಟೌಟ್ ಹಾಕಿ, ಥಿಯೇಟರ್ ಗಳ ಮುಂದೆ ರಾರಾಜಿಸುತ್ತಿದ್ದಾರೆ ಎಂದರು.
ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತ ಗೆಳತಿ ವಿ. ಕೆ. ಶಶಿಕಲಾ ಅವರು ತಮ್ಮ "ಪ್ರಿಯ ಸಹೋದರ" ಎಂದು ಸಂಭೋದಿಸಿ ಸಂತೋಷ ಮತ್ತು ಹೃತ್ಪೂರ್ವಕಗಳು ನಿಮಗೆ ಎಂದು ಹೇಳಿದ್ದಾರೆ. ರಜನಿಕಾಂತ್ ಅವರ ಸರಳತೆ ಮತ್ತು ಜನರೊಂದಿಗೆ ಅವರ ಸಮಾನತೆಯಿಂದ ಬೆರೆಯುವ ಮನಸ್ಸು ಹೆಮ್ಮೆ ತರುತ್ತದೆ ಎಂದಿದ್ದಾರೆ.
ರಜನಿಕಾಂತ್ 75, ಚಿತ್ರರಂಗದಲ್ಲಿ 50
ಈ ಮೈಲಿಗಲ್ಲನ್ನು ಸ್ಮರಿಸಲು, ರಜನಿಕಾಂತ್ ಅವರ ಬ್ಲಾಕ್ಬಸ್ಟರ್ ಚಿತ್ರ 'ಪಡಯಪ್ಪ' ಮರುಮಾದರಿ ಮಾಡಿದ 4K ಆವೃತ್ತಿಯಲ್ಲಿ ವಿಶ್ವಾದ್ಯಂತ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಸೇರಿ, ಕಟೌಟ್‌ಗಳು, ಹಾಲಿನ ಅಭಿಷೇಕಗಳು ಮತ್ತು ಪಟಾಕಿಗಳೊಂದಿಗೆ ಸಂಭ್ರಮಿಸಿದರು. ತಮಿಳುನಾಡು ಮತ್ತು ವಿದೇಶಗಳಲ್ಲಿ ಅನೇಕ ಚಿತ್ರಮಂದಿರಗಳು ಉತ್ತಮ ಮುಂಗಡ ಬುಕಿಂಗ್ ಕಂಡಿವೆ.
ಸಿಂಗಾಪುರ ಸೇರಿದಂತೆ ಅನೇಕ ಕಡೆ ವಿದೇಶಗಳಲ್ಲಿ, 1992 ರ ಹಿಟ್ 'ಅಣ್ಣಾಮಲೈ' "50 ಗೋಲ್ಡನ್ ಇಯರ್ಸ್ ಆಫ್ ರಾಜಿನಿಸಂ" ಕಾರ್ಯಕ್ರಮಗಳನ್ನು ಆಚರಿಸಿದ್ದಾರೆ.
ರಜನಿ ಅಭಿಮಾನಿಗಳು ಚೆನ್ನೈನಲ್ಲಿ, ಹಬ್ಬದ ರೀತಿ ಸಂಭ್ರಮಿಸಿದ್ದಾರೆ. "ತಲೈವರ್ 75 | ರಜನಿ ಹಿಟ್ಸ್" ನಂತಹ ಕಾರ್ಯಕ್ರಮಗಳು, ಅವರ ಚಲನಚಿತ್ರಗಳ ಐಕಾನಿಕ್ ಹಾಡುಗಳನ್ನು ಒಳಗೊಂಡ ನಾಲ್ಕು ಗಂಟೆಗಳ ಲೈವ್ ಕನ್ಸರ್ಟ್, ಚೋರ್ಡ್ಸ್ & ಸ್ಟ್ರಿಂಗ್ಸ್, ಅಭಿಮಾನಿಗಳು ಥೀಮ್ಡ್ ಉಡುಗೆಯಲ್ಲಿ, ಅವರ ಸಿಗ್ನೇಚರ್ ಶೈಲಿಗಳಲ್ಲಿ ಬಟ್ಟೆ ಧರಿಸಿಕೊಂಡು ಓಡಾಡಿ ಸಂಭ್ರಮಿಸಿದ್ದಾರೆ.
ಕಳೆದ ರಾತ್ರಿ ಚೆನ್ನೈಯಲ್ಲಿ 'ಸೂಪರ್ ಸ್ಟಾರ್ ಬರ್ತ್‌ಡೇ' ಮತ್ತು 'ತಲೈವಾ 75' ರಜನಿ-ವಿಷಯದ ಕಾರ್ಯಕ್ರಮಗಳೊಂದಿಗೆ ಆಚರಣೆಗಳು, ಡಿಜೆ ಸೆಟ್‌ಗಳು, ಲೈವ್ ಪ್ರದರ್ಶನಗಳು ಕಂಡವು.
ತಮಿಳುನಾಡಿನಾದ್ಯಂತ ಅಭಿಮಾನಿ ಸಂಘಗಳು ಸಾಮಾಜಿಕ ಚಟುವಟಿಕೆಗಳು, ಕೇಕ್ ಕತ್ತರಿಸುವುದು ಮತ್ತು ಪ್ರದರ್ಶನಗಳೊಂದಿಗೆ ದಿನವನ್ನು ಆಚರಿಸಿದವು. ರಜನಿ ನಿವಾಸದ ಮುಂದೆ ಜನರು, ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
Advertisement