
ಇಳಿ ವಯಸ್ಸಲ್ಲೂ ಸೂಪರ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ಸೂಪರ್ ಸ್ಟಾರ್ ಈಗ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವ ರಜನಿಕಾಂತ್, ಪ್ರಸ್ತುತ ಆಧ್ಯಾತ್ಮಿಕ ಪ್ರಯಾಣ ಪ್ರಾರಂಭಿಸಿದ್ದಾರೆ.
ರಜನಿಕಾಂತ್ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿದರು. ಅಲ್ಲಿದ್ದ ಸಮಯದಲ್ಲಿ, ತಲೈವಾ ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದರು ಮತ್ತು ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಅವರ ಆಧ್ಯಾತ್ಮಿಕ ಪ್ರವಾಸದ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಒಂದು ಫೋಟೋದಲ್ಲಿ ರಜನಿಕಾಂತ್ ಬಿಳಿ ಬಟ್ಟೆಗಳನ್ನು ಧರಿಸಿ, ರಸ್ತೆಬದಿಯ ಕಲ್ಲಿನ(ತಡೆಗೋಡೆ) ಮೇಲ್ಮೈಯಲ್ಲಿ ಇರಿಸಲಾದ ಎಲೆ ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ಊಟ ಮಾಡುತ್ತಿದ್ದಾರೆ. ಅಲ್ಲದೆ, ಬೆಟ್ಟದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಕಾರು ಕಂಡುಬಂದಿದೆ.
ಇನ್ನೊಂದು ಫೋಟೋದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ಆಶ್ರಮವೊಂದರಲ್ಲಿ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ನಂತರ ರಜನಿಕಾಂತ್ ಒಬ್ಬ ಪುರೋಹಿತರ ಪಕ್ಕದಲ್ಲಿ ನಿಂತು ಗೌರವ ಸಲ್ಲಿಸುತ್ತಿರುವ ಚಿತ್ರ ಕೂಡ ಇದೆ. ರಜನಿಕಾಂತ್ ಅವರ ಸರಳತೆಗೆ ಅವರ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರಿಗೆ ಇನ್ನೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
Advertisement