ಇಲ್ಲಿಗೆ ಏಕೆ ಬಂದಿರುವುದಾಗಿ ಆಕೆಯನ್ನು ಸಿಎಂ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಆಕೆ, ರಸ್ತೆ ಅಪಘಾತದಲ್ಲಿ ತಾನು ಬಲ ಕೈ ಕಳೆದುಕೊಂಡಿದ್ದು, ತಾನು ಟಾಪ್ ರೈಟಿಂಗ್ ಕಲಿತಿರುವುದಾಗಿ ತಿಳಿಸಿದ್ದಾರೆ, ತನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ, ಜೊತೆಗೆ ಸರ್ಕಾರದ ಅಂಗವಿಕಲ ಪಿಂಚಣಿಯೂ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.