ಕಲಬುರ್ಗಿ: ಅಕ್ರಮ ಸಂಬಂಧ ಶಂಕೆ, ಪೋಷಕರೊಡನೆ ಸೇರಿ ಪತ್ನಿಗೆ ಬೆಂಕಿ ಹಚ್ಚಿದ ಪತಿ!
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯಗೊಂಡ ಪತಿ ತನ್ನ ಪೋಷಕರೊಡನೆ ಸೇರಿ ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಕಲಬುರ್ಗಿ ಜಿಲ್ಲೆ ಅಳಂದ ತಾಲೂಕಿನಲ್ಲಿ ನಡೆದಿದೆ.
ಕಲಬುರ್ಗಿ: ಅಕ್ರಮ ಸಂಬಂಧ ಶಂಕೆ,ಪೋಷಕರೊಡನೆ ಸೇರಿ ಪತ್ನಿಗೆ ಬೆಂಕಿ ಹಚ್ಚಿದ ಪತಿ!
ಕಲಬುರ್ಗಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸಂಶಯಗೊಂಡ ಪತಿ ತನ್ನ ಪೋಷಕರೊಡನೆ ಸೇರಿ ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಕಲಬುರ್ಗಿ ಜಿಲ್ಲೆ ಅಳಂದ ತಾಲೂಕಿನಲ್ಲಿ ನಡೆದಿದೆ.
ಅಳಂದದ ಕೂಡಲಹಂಗರಗಾ ಗ್ರಾಮದ ನಿವಾಸಿ ಶಾರದಾಬಾಯಿ (20) ಬೆಂಕಿಯಿಂದ ಸುಟ್ಟು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿಯಾಗಿದ್ದು ಆಕೆಯ ಮುಖ ದೇಹದ ಬಹುತೇಕ ಭಾಗ ಬೆಂಕಿಯಿಂದ ಸುಟ್ಟು ಕರಕಲಾಗಿದೆ.
ವರ್ಷದ ಹಿಂದಷ್ಟೇ ಕೃಷಿಕನಾಗಿ ಕೆಲಸ ಮಾಡುತ್ತಿರುವ ವೀರಣ್ಣನನ್ನು ವರಿಸಿದ್ದ ಶಾರದಾಬಾಯಿ ಕುರಿತಂತೆ ಪತಿ ವೀರಣ್ಣ ಸದಾ ಸಂಶಯ ತಾಳುತ್ತಿದ್ದ. ’ನಿನ್ನ ನಡತೆ ಸರಿಯಿಲ್ಲ’ ಎಂದು ಜಗಳ ತೆಗೆಯುತ್ತಿದ್ದ.
ಶುಕ್ರವಾರ ಬೆಳಿಗ್ಗೆ ಸಹ ವಿನಾಕಾರಣ ಜಗಳ ತೆಗೆದ ಪತಿ ವೀರಣ್ಣ ತನ್ನ ತಾಯಿ ನೀಲಮ್ಮ, ಹಾಗೂ ತಂದೆ ಗುಂಡಪ್ಪ ಜತೆ ಸೇರಿ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆ ನಂತರ ಶಾರದಾಬಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ವೀರಣ್ಣ ಮತ್ತು ಆತನ ಕುಟುಂಬ ನಾಪತ್ತೆಯಾಗಿದೆ.