ವಿಜಯಪುರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಬಿ.ಎಸ್. ಪಾಟೀಲ್ ಸಾಸನೂರ(87) ಅವರು ಭಾನುವಾರ ನಿಧನರಾಗಿದ್ದಾರೆ. .ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಬಿಎಲ್‍ಡಿಇ ಆಸ್ಪತ್ರೆಗೆ ದಾಖಲಾಗಿದ್ದ ಬಿಎಸ್ ಪಾಟೀಲ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 8.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ..ಬಿ ಎಸ್ ಪಾಟೀಲ ಅವರ ಪುತ್ರ ಸೋಮನಗೌಡ ಪಾಟೀಲ ಸಾಸನೂರ ದೇವರಹಿಪ್ಪರಗಿ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ. .ಮೃತರ ಅಂತ್ಯಕ್ರಿಯೆ ಸೋಮವಾರ ಹಿರೂರಿನಲ್ಲಿ ನಡೆಯಲಿದ್ದು ಸಾಸನೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ..ಬಸನಗೌಡ ಸಂಗನಗೌಡ ಪಾಟೀಲ್ ಸಾಸನೂರ ಅವರು ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಒಟ್ಟು ಐದು ಬಾರಿ ಕಾಂಗ್ರೆಸ್ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. .ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ ಆಗಿದ್ದರು. ಬಿ.ಎಸ್.ಪಾಟೀಲ್ ಅವರ ತಂದೆ ಸೋಮನಗೌಡ ಪಾಟೀಲ್ ಸಾಸನೂರ ಬಿಜೆಪಿ ಶಾಸಕರಾಗಿದ್ದರು..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics