ಬನ್ನೇರುಘಟ್ಟ: 80 ಕೋಟಿ ದಂಡ ಕಟ್ಟಬೇಕಿದ್ದ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ

ರಾಜ್ಯದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಬನ್ನೇರುಘಟ್ಟ ಪ್ರದೇಶದಲ್ಲಿರುವ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ ಜಡಿಯಲಾಗಿದೆ.
ಬನ್ನೇರುಘಟ್ಟ: 80 ಕೋಟಿ ದಂಡ ಕಟ್ಟಬೇಕಿದ್ದ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ
ಬನ್ನೇರುಘಟ್ಟ: 80 ಕೋಟಿ ದಂಡ ಕಟ್ಟಬೇಕಿದ್ದ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ
ಬೆಂಗಳೂರು: ರಾಜ್ಯದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಬನ್ನೇರುಘಟ್ಟ  ಪ್ರದೇಶದಲ್ಲಿರುವ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ ಜಡಿಯಲಾಗಿದೆ. 
ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿರುವ ತಿಮ್ಮನಾಯಕನಹಳ್ಳಿಯಲ್ಲಿನ ಎಎಸ್ ಝೆಡ್  ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ 10 ಗಣಿಗಾರಿಕೆ ಕಂಪನಿಗಳು ಅಕ್ರಮವೆಸಗಿದ್ದರ ಪರಿಣಾಮವಾಗಿ 80 ಕೋಟಿ ದಂಡ  ವಿಧಿಸಲಾಗಿದೆ. ಇದಕ್ಕೂ ಮುನ್ನ ಏಪ್ರಿಲ್ ತಿಂಗಳಲ್ಲಿ ಶಿವನಹಳ್ಳಿಯಲ್ಲಿ 5 ಕಂಪನಿಗಳಿಗೆ ಬೀಗ ಜಡಿಯಲಾಗಿತ್ತು. 
ಗಣಿಗಾರಿಕೆ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ತಪಾಸಣೆ ಮಾಡಿದ್ದು, 15 ಗಣಿಗಾರಿಕೆ ಕಂಪನಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 1-10 ಕಿಮೀ ವ್ಯಾಪ್ತಿಯಲ್ಲಿ ಹೆಚ್ಚು ಗಣಿಗಾರಿಕೆ ಮಾಡಿದ್ದು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಹೆಚ್ಚು ಗಣಿಗಾರಿಕೆ ಮಾಡಿರುವುದಷ್ಟೇ ಅಲ್ಲದೇ, ಮಾಲಿನ್ಯ ತಡೆಗೆ ಇರುವ ನಿಯಮಗಳನ್ನು ಪಾಲನೆ ಮಾಡದೇ ಇರುವುದು, ಗಡಿಯನ್ನು ಸರಿಯಾಗಿ ಪಾಲನೆ ಮಾಡಿರುವುದೂ ಸೇರಿದಂತೆ ಗಂಭೀರವಾದ ತಪ್ಪುಗಳೂ ನಡೆದಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಗಣಿಗಾರಿಕೆ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿ ಎನ್ಎಸ್ ಪ್ರಸನ್ನ ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com