ರಾಜ್ಯಾದ್ಯಂತ ವರುಣನ ಆರ್ಭಟ: ಕಬಿನಿ, ಕೆಆರ್ ಎಸ್ ಜಲಾಶಯಗಳ ನೀರಿನ ಮಟ್ಟ ಏರಿಕೆ

ರಾಜ್ಯಕ್ಕೆ ಈ ವರ್ಷ ಮುಂಗಾರು ಆರಂಭದಲ್ಲೇ ವರುಣನ ಕೃಪೆಯಾಗಿದ್ದು, ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳು ಕಳೆಗಟ್ಟತೊಡಗಿವೆ....
ಕೆಆರ್ ಎಸ್ ಜಲಾಶಯ
ಕೆಆರ್ ಎಸ್ ಜಲಾಶಯ
ಬೆಂಗಳೂರು: ರಾಜ್ಯಕ್ಕೆ ಈ ವರ್ಷ ಮುಂಗಾರು ಆರಂಭದಲ್ಲೇ ವರುಣನ ಕೃಪೆಯಾಗಿದ್ದು, ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳು ಕಳೆಗಟ್ಟತೊಡಗಿವೆ.
ಕಾವೇರಿ ಹಾಗೂ ಕಬಿನಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆ.ಆರ್.ಸಾಗರ ಸೇರಿ ಕಾವೇರಿ ಕಣಿವೆ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ  ಕಳೆದ 10 ದಿನದಿಂದ ಕೆಆರ್​ಎಸ್  ನೀರಿನ ಮಟ್ಟ 80 ಅಡಿ ತಲುಪಿದೆ.
ಕೆಆರ್ ಎಸ್ ನ ಒಳಹರಿವು 8 ಸಾವಿರ ಕ್ಯೂಸೆಕ್ಸ್ ಇತ್ತು, ಕೊಡಗು ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು 15 ಸಾವಿರ ಕ್ಯೂಸೆಕ್ಸ್ ತಲುಪಿದೆ, 
ಕೆಆರ್ ಎಸ್ ಜಲಾಶಯ
ಪ್ರಸಕ್ತ ನೀರಿನ ಮಟ್ಟ-80 ಅಡಿ
ಗರಿಷ್ಟ ಮಟ್ಟ- 124 ಅಡಿ
ಒಳಹರಿವು- 8ಸಾವಿರ ಕ್ಯೂಸೆಕ್ಸ್
ಕಬಿನಿ ಜಲಾಶಯ
ಪ್ರಸಕ್ತ ನೀರಿನ ಮಟ್ಟ-2,267 ಅಡಿ
ಗರಿಷ್ಟ ನೀರಿನ ಮಟ್ಟ-2,284 ಅಡಿ
ಒಳಹರಿವು- 23ಸಾವಿರ ಕ್ಯೂಸೆಕ್ಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com