ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ 467 ಕೋಟಿ ರೂ. ಹೆಚ್ಚಿನ ಅನುದಾನ ಮಂಜೂರು

ಈ ವರ್ಷದ ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ- ಆರ್ ಯುಎಸ್ ಎ ಅಡಿಯಲ್ಲಿ ಕರ್ನಾಟಕ ಸಿಂಹಪಾಲು ಪಡೆದುಕೊಂಡಿದೆ. ದೇಶದಲ್ಲಿಯೇ ಅತಿ ಹೆಚ್ಚಿನ ಅನುದಾನವನ್ನು ಕರ್ನಾಟಕಕ್ಕೆ ಮಂಜೂರು ಆಗಿದೆ.
ಮೈಸೂರು ವಿವಿ
ಮೈಸೂರು ವಿವಿ
Updated on
ಬೆಂಗಳೂರು: ಈ ವರ್ಷದ ರಾಷ್ಟ್ರೀಯ  ಉಚ್ಚತರ್ ಶಿಕ್ಷಾ ಅಭಿಯಾನ- ಆರ್ ಯುಎಸ್ ಎ ಅಡಿಯಲ್ಲಿ  ಕರ್ನಾಟಕ ಸಿಂಹಪಾಲು ಪಡೆದುಕೊಂಡಿದೆ. ದೇಶದಲ್ಲಿಯೇ ಅತಿ ಹೆಚ್ಚಿನ ಅನುದಾನ ಕರ್ನಾಟಕಕ್ಕೆ ಮಂಜೂರು ಆಗಿದೆ.
ರಾಜ್ಯಸರ್ಕಾರ ನಡೆಸುತ್ತಿರುವ ವಿಶ್ವವಿದ್ಯಾಲಯ ಮಾತ್ರವಲ್ಲವೇ, ಸರ್ಕಾರ ಮತ್ತು ಸ್ವಾಯತ್ತ  ಕಾಲೇಜುಗಳಿಗೂ ಈ ಬಾರಿ  ಆರ್ ಯುಎಸ್ ಎ ನಿಧಿಯಲ್ಲಿ ಹಂಚಿಕೆ ಮಾಡಲಾಗಿದೆ.
ಈ ಮಧ್ಯೆ ಸಂಶೋಧನೆ ಮತ್ತು ಅನ್ವೇಷಣೆಗಾಗಿ ಮೈಸೂರು ವಿವಿಗೆ 50 ಕೋಟಿ, ಬೆಂಗಳೂರು ವಿವಿಗೆ 20 ಕೋಟಿ ರೂ. ಹಂಚಿಕೆ ಮಾಡಲಾಗಿದೆ.   ರಾಜ್ಯದಲ್ಲಿನ 113ಕ್ಕೂ ಹೆಚ್ಚು ಪದವಿ ಕಾಲೇಜುಗಳಿಗೆ  ತಲಾ 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಮೂಲಸೌಕರ್ಯ ಅಭಿವೃದ್ದಿ, ದುರಸ್ತಿ ಕೆಲಸ, ಪ್ರಾಯೋಗಾಲಯ ಸೌಕರ್ಯ ಮತ್ತು ವಿವಿ ಆವರಣದಲ್ಲಿ  ಉತ್ತಮ ನೆಟ್ ವರ್ಕಿಂಗ್ ಸೌಲಭ್ಯ ಕ್ಕಾಗಿ ಈ ಹಣ ಹಂಚಿಕೆಯಾಗಿದೆ ಎಂದು  ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಆರ್ ಯುಎಸ್ ಎ ನಿಧಿಯಡಿ ಅನುದಾನ ಪಡೆಯಲು ವಿಶ್ವವಿದ್ಯಾಲಯಗಳು ನ್ಯಾಕ್ ನಿಂದ 2.5 ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ ಎಂಬ ಮಾರ್ಗಸೂತ್ರ  ರೂಪಿಸಲಾಗಿದೆ.
 ಅದರಂತೆ ಮೈಸೂರು ವಿಶ್ವ ವಿದ್ಯಾಲಯ ನ್ಯಾಕ್ ನಿಂದ 3.47 ರಷ್ಟು ಅಂಕ ಪಡೆದಿದ್ದು,  100 ಕೋಟಿ ಅನುದಾನದಿಂದ  ವಂಚಿತವಾಗಿದೆ. ಇದನ್ನು ಪಡೆಯಲು 3.51 ಅಂಕಗಳ ಅಗತ್ಯವಿದೆ.
ನ್ಯಾಕ್ ನಿಂದ ಮಾನ್ಯತೆ ಪಡೆಯದ ಕೆಲ ವಿಶ್ವವಿದ್ಯಾಲಯಗಳು ಅನುದಾನ ಪಡೆಯಲು ಅರ್ಹರಿಲ್ಲ. ಬೆಳಗಾವಿಯ   ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ರಾಣಿ ಚೆನ್ನಮ್ಮ ವಿವಿ ಮತ್ತಿತರ ವಿಶ್ವವಿದ್ಯಾಲಯಗಳಿಗೆ ಇದು ಅನ್ವಯವಾಗುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com