ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಗೆ ತುಂಬಿ ಹರಿದ ನದಿಗಳು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧರಾತ್ರಿ ಪ್ರಾರಂಭವಾದ ಮಳೆ ಇಂದೂ ಕೂಡಾ ಬಿಟ್ಟಿಲ್ಲ. ಭಾರೀ ಮಳೆಯಿಂದಾಗಿ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತವಾಗಿದೆ.
ಭೂಕುಸಿತದ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಚಿತ್ರ
ಭೂಕುಸಿತದ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಚಿತ್ರ
Updated on: 

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧರಾತ್ರಿ ಪ್ರಾರಂಭವಾದ ಮಳೆ ಇಂದೂ ಕೂಡಾ ಬಿಟ್ಟಿಲ್ಲ. ಭಾರೀ ಮಳೆಯಿಂದಾಗಿ   ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತವಾಗಿದೆ.  ಎರಡು ಜಿಲ್ಲೆಗಳ ಸಂಪರ್ಕವಿಲ್ಲದೆ ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶ ಹಾಗೂ ಸೇತುವೆಗಳು ಜಲಾವೃತಗೊಂಡಿದ್ದು, ವೆನೂರು- ಮೂಡಬಿದರೆ - ಗುರುವಾಯನಕೆರೆ  ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.  ಭೂಕುಸಿತದಿದಾಗಿ ಲಾಯಿಲಾ- ಪಾಟ್ಲಡಿ ರಸ್ತೆ ಹಲವು  ತಾಸುಗಳ ಕಾಲ ಸ್ಥಗಿತಗೊಂಡಿತ್ತು.  

ಬೆಳ್ತಂಗಡಿಯ ಸಾರ್ವಜನಿಕ ಆಸ್ಪತ್ರೆಯ ಕೌಂಪೌಂಡಿನ ಒಂದು  ಭಾಗ ಕುಸಿದು ಬಿದ್ದಿದ್ದು,  ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕುಗಳ ಶಾಲಾ, ಕಾಲೇಜುಗಳಿಗೆ  ನಿನ್ನೆ ರಜೆ ಘೋಷಿಸಲಾಗಿತ್ತು.

 ತುಂಗಾ ನದಿ ಪ್ರವಾಹದಿಂದಾಗಿ ಶೃಂಗೇರಿ ಬಳಿ ನಮ್ಮಾರ್ ಬಳಿ ಸುಮಾರು 50 ವಾಹನಗಳು 10 ಗಂಟೆಗೂ ಹೆಚ್ಚು ಕಾಲ ನಿಲ್ಲಬೇಕಾಯಿತು. ಶೃಂಗೇರಿಯಿಂದ ಮಂಗಳೂರು ಮತ್ತಿತರ ಕಡೆ ತೆರಳಬೇಕಾದ ಪ್ರಯಾಣಿಕರನ್ನು   ಪರ್ಯಾಯ ಮಾರ್ಗಗಳ ಮೂಲಕ  ತಲುಪುವಂತೆ  ವ್ಯವಸ್ಥೆ ಮಾಡಲಾಯಿತು. ಈ  ಭಾಗದಲ್ಲಿ ಮೊಬೈಲ್ ಟವರ್  ಉರುಳಿ ಬಿದ್ದಿದ್ದು, ವಿದ್ಯುತ್  ಪೂರೈಕೆಯೂ  ಸ್ಥಗಿತಗೊಂಡಿದೆ ಎಂದು ಎಸ್ ಪಿ ಅಣ್ಣಾಮಲೈ ತಿಳಿಸಿದ್ದಾರೆ.

 ಈ ಮಧ್ಯೆ ಭೂಕುಸಿತದಿಂದ ಬಂದ್ ಮಾಡಲಾಗಿದ್ದ ಚಾರ್ಮಾಡಿ ಘಾಟ್  ರಸ್ತೆಯನ್ನು ಪುನರ್ ಆರಂಭಿಸಲಾಗಿದೆ.  ಬಲ್ಮಣಿ ನದಿಯ ಪ್ರವಾಹದಿಂದಾಗಿ ಕೊಡಗು ಬಳಿ ಸೇತುವೆಯೊಂದು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಮೈಸೂರು- ತಿತಿಮಥಿ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com