
ಬೆಂಗಳೂರು : ಡೀಸೆಲ್ ದರ ಏರಿಕೆ, ಥರ್ಡ್ ಪಾರ್ಟಿ ಪ್ರೀಮಿಯಂ ದುಬಾರಿ ದರ ಏರಿಕೆ ವಿರೋಧಿಸಿ ನಾಳೆಯಿಂದ ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಕರ್ನಾಟಕದಲ್ಲಿ 9 ಲಕ್ಷದ 30 ಸಾವಿರ ಲಾರಿಗಳೂ ಸೇರಿದಂತೆ ದೇಶಾದ್ಯಂತ 93 ಲಕ್ಷ ಲಾರಿಗಳು ತಮ್ಮ ಸರಕು ಸಾಗಾಣಿಕೆ ಮಾಡದೆ ಸಂಪೂರ್ಣ ಬಂದ್ ಮಾಡಲಿದ್ದು, ಸಾಗಾಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ.
ನೋಟು ಅಮಾನ್ಯೀಕರಣದ ಬಳಿಕ ಕೇಂದ್ರಸರ್ಕಾರಕ್ಕೆ 10 ಲಕ್ಷ ಕೋಟಿಗೂ ಅಧಿಕ ಹಣ ಬಂದಿದೆ. ಹೀಗಿದ್ದರೂ ಥರ್ಡ್ ಪಾರ್ಟಿ ಪ್ರೀಮಿಯಂ ಹೆಚ್ಚಳ ಹಾಗೂ ಡೀಸೆಲ್ ದರ ಏರಿಕೆ ಮಾಡುವ ಮೂಲಕ ಲಾರಿ ಮಾಲೀಕರು ಮತ್ತು ಅವರ ಅವಲಂಬಿತರ ಮೇಲೆ ಕೇಂದ್ರಸರ್ಕಾರ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.
ಅಖಿಲ ಭಾರತ ಲಾರಿ ಸರಕು ಸೇವಾ ವಾಹನಗಳ ಮಾಲೀಕರ ಸಂಘ ಹಾಗೂ ರಾಜ್ಯ ಲಾರಿ ಮಾಲೀಕರ ಒಕ್ಕೂಟ ಲಾರಿ ಮುಷ್ಕರಕ್ಕೆ ಕೈ ಜೋಡಿಸಿವೆ.
Advertisement