ಬೆಂಗಳೂರು: ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ 8 ವಿದ್ಯಾರ್ಥಿಗಳು ಪತ್ತೆ

ಟ್ಯೂಷನ್‌ಗೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದ 8 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಟ್ಯೂಷನ್‌ಗೆಂದು  ಮನೆಯಿಂದ ಹೊರಟು ನಾಪತ್ತೆಯಾಗಿದ್ದ 8 ವಿದ್ಯಾರ್ಥಿಗಳು ಮಾಗಡಿಯಲ್ಲಿ  ಪತ್ತೆಯಾಗಿದ್ದಾರೆ. 
ಸೇಂಟ್​ ಕ್ಲಾರೆನ್ಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳು ಟ್ಯೂಷನ್​​ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ ಟ್ಯೂಷನ್‌ಗೂ ಹೋಗದೆ ನಿನ್ನೆ ಸಂಜೆ 5 ಗಂಟೆಯಿಂದ ಕಣ್ಮರೆಯಾಗಿದ್ದರು.
ರಾಜೇಶ್(14), ಸೃಜನ್​ಶೆಟ್ಟಿ(14), ಅನೂಪ್(14), ಚಂದನ್(15), ರೇಣು(14) ಸೇರಿ ಎಂಟು ಜನ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com