ಗೌರಿ ಲಂಕೇಶ್ ಹತ್ಯೆ: ಪರಶುರಾಮ್ ವಾಗ್ಮೋರೆಯನ್ನು ಕರೆದ್ಯೊಯ್ದು ಎಸ್ಐಟಿಯಿಂದ ಹಲವಡೆ ಮಹಜರ್!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು...
ಪರಶುರಾಮ್ ವಾಗ್ಮೋರೆ
ಪರಶುರಾಮ್ ವಾಗ್ಮೋರೆ
ವಿಜಯಪುರ/ಬೆಳಗಾವಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಹಲವು ಸ್ಥಳಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ. 
ಬೆಳಗಾವಿಯ ಖಾನಾಪುರ ಅರಣ್ಯದ ಜಂಬೋಟಿಗೆ ಕರೆದುಕೊಂಡು ಹೋಗಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ವಾಗ್ಮೋರೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಆತನಿಂದ ಹಲವು ಮಾಹಿತಿಗಳನ್ನು ಪಡೆದಿದ್ದರು. ನಂತರ ವಿಚಾರಣೆಗಾಗಿ ಆತನನ್ನು ಗುಪ್ತಸ್ಥಳಕ್ಕೆ ಕರೆದ್ಯೊಯ್ದು ವಿಚಾರಣೆ ನಡೆಸಿದ್ದರು. ಗುಂಡಿನ ತರಬೇತಿ ಪಡೆದ ಸ್ಥಳಗಳನ್ನು ಪರಿಶೀಲಿಸಿದರು. ಇದಾದ ನಂತರ ರಾಮನಗರಕ್ಕೆ ಕರೆದ್ಯೊಯ್ದು ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. 
ಮೂಲಗಳ ಪ್ರಕಾರ, ವಾಗ್ಮೋರೆ ಗೌರಿ ಹತ್ಯೆಗೂ ಕೆಲ ತಿಂಗಳುಗಳ ಮುಂಚೆ ಒಂದು ಗ್ಯಾಂಗ್ ಜೊತೆ ಸೇರಿಕೊಂಡಿದ್ದ. ಸಿಂಧಗಿಯಲ್ಲಿ ನಾಲ್ವರ ತಂಡ ಒಟ್ಟುಗೂಡಿ ಗೌರಿ ಹತ್ಯೆಗೆ ಪ್ಲಾನ್ ಮಾಡಿದ್ದರು. ಹಿಂದುತ್ವದ ಬಗ್ಗೆ ಅಪಾರ ಗೌರವ ಇದ್ದಿದ್ದರಿಂದ ಈ ಕೃತ್ಯಕ್ಕೆ ವಾಗ್ಮೋರೆಯನ್ನು ಆರಿಸಿಕೊಂಡಿದ್ದರು ಎಂದು ತನಿಖಾ ತಂಡದ ಮುಂದೆ ಮತ್ತೋರ್ವ ಆರೋಪಿ ಅಮೋಲ್ ಕಾಳೆ ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com