ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಲು ಪರಶುರಾಮ್ ವಾಗ್ಮೊರೆ ಬ್ರೈನ್ ವಾಶ್ ಮಾಡಲಾಗಿತ್ತೇ ?

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕಣರದ ತನಿಖೆ ಬಿರುಸುನಿಂದ ಸಾಗಿದ್ದು,ಆರೋಪಿ ಪರುಶುರಾಮ್ ವಾಗ್ಮೊರೆ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಳಗಾವಿ/ ವಿಜಯಪುರ: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್  ಹತ್ಯೆ ಪ್ರಕಣರದ ತನಿಖೆ ಬಿರುಸುನಿಂದ ಸಾಗಿದ್ದು, ಆರೋಪಿ ಪರುಶುರಾಮ್ ವಾಗ್ಮೊರೆ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ. 
ಹಿಂಧೂ ಧರ್ಮ ಕುರಿತಂತೆ ಗೌರಿ ಲಂಕೇಶ್ ಬರೆಯುತ್ತಿದ್ದ ಲೇಖನಗಳನ್ನು ಆತನಿಗೆ ತೋರಿಸಿ  ಕೊಲೆ ಮಾಡುವಂತೆ ಮನವೊಲಿಸಲಾಗಿದೆ ಎಂಬಂತಹ ಸಂಗತಿಗಳು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಗೌರಿ ಲಂಕೇಶ್ ಹತ್ಯೆಯಾದ ಸೆಪ್ಟೆಂಬರ್ 5 ಕ್ಕಿಂತಲೂ ಮುಂಚೆ  ಇತರ ಆರೋಪಿಗಳು  ಸಿಂದಗಿಯಲ್ಲಿ ಪರಶುರಾಮ್ ವಾಗ್ಮೊರೆಯನ್ನು  ಭೇಟಿಯಾಗಿ ಹತ್ಯೆ ಮಾಡುವಂತೆ ಮನವೊಲಿಸಿದ್ದರು ಎಂದು ಪೊಲೀಸ್ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.
ಈ ಪ್ರಕರದ ಮಾಸ್ಟರ್ ಮೈಂಡ್  ಅಮೊಲ್ ಕಾಳೆ  ಸಿಂದಗಿಯಲ್ಲಿ ವಾಗ್ಮೊರೆಯನ್ನು ಭೇಟಿಯಾಗಿ  ಹತ್ಯೆ ಯೋಜನೆ ಬಗ್ಗೆ ವಿವರಿಸಿದ್ದಾನೆ. ಹತ್ಯೆಯ ಮುನ್ನಾ ಹಾಗೂ ನಂತರ ಮುನ್ನೆಚ್ಚರಿಕೆ ವಹಿಸುವಂತೆಯೂ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ನಾಲ್ಕು ಜನರ ತಂಡ ಸಿದಂಗಿಯಲ್ಲಿ  ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದು,  ಹತ್ಯೆ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬಂತಹ ಮಾಹಿತಿ  ಮೂಲಗಳಿಂದ ತಿಳಿದುಬಂದಿದೆ.
ಈ ಕೆಲಸ ಮಾಡಲು ವಾಗ್ಮೊರೆ ತಿರಸ್ಕರಿಸಿದ್ದರೂ,  ಹಿಂಧೂ ಧರ್ಮ ಕುರಿತಂತೆ  ಗೌರಿ ಲಂಕೇಶ್  ದೃಷ್ಟಿಕೋನವನ್ನು ವಿವರಿಸಿ ಆತನ ಮನವೊಲಿಸಲಾಗಿತ್ತು.  ನಂತರ ವಾಗ್ಮೊರೆ ಕೊಲೆ ಮಾಡಲು ಒಪ್ಪಿಕೊಂಡು  ಬಂದೂಕು ತರಬೇತಿ ಪಡೆದುಕೊಂಡಿದ್ದ.  ವಿಜಯಪುರದ ಮತ್ತೊಬ್ಬ ಆರೋಪಿ ಮನೋಹರ್ ಎಡಾವೆ  ಸಾಥ್ ನೀಡಿದ್ದ ಎನ್ನಲಾಗಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ, ವಾಗ್ಮೊರೆ ಬಂದೂಕು ತರಬೇತಿ ಪಡೆದುಕೊಂಡಿದ್ದ ಬೆಳಗಾವಿಯ  ಖಾನ್ ಪುರ ಬಳಿಯ ಜಂಬಟ್ಟಿ ಹಾಗೂ  ಉತ್ತರ  ಕನ್ನಡದ ಗಡಿ ಭಾಗ ರಾಮನಗರಕ್ಕೆ ಕರೆದುಕೊಂಡು ಹೋಗಿ  ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ.
ಪುಣೆಯ ಅಮೊಲ್ ಕಾಳೆ, ಗೋವಾದ ಅಮಿತ್ ದೆಗ್ ವೆಕರ್,  ವಿಜಯಪುರದ ಮನೋಹರ್ ಎಡಾವೆ  ಗೌರಿ ಲಂಕೇಶ್,  ಎಂ.ಎಂ. ಕಲಬುರಗಿ, ಹಾಗೂ ಗೋವಿಂದ ಪನ್ಸಾರೆಯ ಪ್ರಮುಖ ಪಿತೂರಿದಾರರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com