ಮಂಗಳೂರು: ಫೇಸ್‌ಬುಕ್‌ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ

ಆನ್ ಲೈನ್ ವಂಚಕರ ಜಾಲದ ಕುರಿತಂತೆ ಪೋಲೀಸ್ ಇಲಖೆ ಎಷ್ಟು ಎಚ್ಚರಿಕೆ ನಿಡಿದ್ದರೂ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.
ಮಂಗಳೂರು: ಫೇಸ್‌ಬುಕ್‌ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ
ಮಂಗಳೂರು: ಫೇಸ್‌ಬುಕ್‌ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ
ಮಂಗಳೂರು: ಆನ್ ಲೈನ್ ವಂಚಕರ ಜಾಲದ ಕುರಿತಂತೆ ಪೋಲೀಸ್ ಇಲಖೆ ಎಷ್ಟು ಎಚ್ಚರಿಕೆ ನಿಡಿದ್ದರೂ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.  ಇತ್ತೀಚೆಗೆ ಫೇಸ್‌ಬುಕ್‌ ನಲ್ಲಿ ಪರಿಚಯವಾದ ಓರ್ವ ವ್ಯಕ್ತಿಯಿಂದ ಮಹಿಳೆಯೊಬ್ಬರು 16.69 ಲಕ್ಷ ರೂ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಘಟನಾ ವಿವರ
ಮಂಗಳುರಿನ ಮಹಿಳೆಯೊಬ್ಬರಿಗೆ ಮೇ 3ರಂದು ಜಾಕ್ ಕೋಲ್ಮನ್ ಎನ್ನುವ ವ್ಯಕ್ತಿ ಫೇಸ್‌ಬುಕ್‌ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ಕೆಲ ದಿನಗಳಲ್ಲಿ ಮಹಿಳೆ ಆತನ ರಿಕ್ವೆಸ್ಟ್ ಗೆ ಅಕ್ಸೆಪ್ಟ್ ನೀಡಿದ್ದು ಇಬ್ಬರೂ ಸ್ನೇಹಿತರಾಗಿದ್ದಾರೆ, ಆನ್ ಲೈನ್ ನಲ್ಲಿ ದಿನನಿತ್ಯ ಚಾಟಿಂಗ್ ನಡೆಸಿದ್ದಾರೆ.
ಅದೊಂದು ದಿನ ಜಾಕ್ ನಾನು ನಿಮ್ಮ ಕುಟುಂಬದ ಒಳಿತಿಗಾಗಿ, ಹಾಗೂ ನನ್ನ ಸ್ನೇಹದ ಕುರುಹಿಗಾಗಿ  20 ಸಾವಿರ ಪೌಂಡ್ ಹಣ ಹಾಗೂ ಉಡುಗೊರೆ ಕಳಿಸುತ್ತೇನೆ ಎಂದಿದ್ದಾನೆ. ಪ್ರಾರಂಭದಲ್ಲಿ ಮಹಿಳೆ ಇದನ್ನು ನಿರಾಕರಿಸಿದ್ದರೂ ಕಡೆಗೆ ಆತನ ಒತ್ತಾಯಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದಾರೆ.
ಇದಾಗಿ ಮೇ 9ರಂದು ಮಹಿಳೆಗೆ ದೆಹಲಿಯ ಕಸ್ಟಮ್ಸ್ ಅಧಿಕಾರಿ ಎಂದು ಹೇಳಿ ಓರ್ವ ವ್ಯಕ್ತಿಯಿಂದ ಕರೆ ಬಂದಿದ್ದು ’ನಿಮ್ಮ ಪಾರ್ಸಲ್ ದೆಹಲಿ ವಿಮಾನ ನಿಲ್ದಾಣ ತಲುಪಿದೆ, ನೀವು ಇದೇ ತಕ್ಷಣ ಇದರ ಶುಲ್ಕ ಕಟ್ಟಿ ಪಾರ್ಸಲ್ ಬಿಡಿಸಿಕೊಳ್ಳಬೇಕಿದೆ. ಇಲ್ಲದೆ ಇದ್ದಲ್ಲಿ ನಿಮಗೆ ತೊಂದರೆಯಾಗಬಹುದು’ ಎಂದು ಎಚ್ಚರಿಸಿದ್ದಾನೆ. ಇದನ್ನು ನಂಬಿದ್ದ ಮಹಿಳೆ ನಾನಾ ಹಂತಗಳಲ್ಲಿ ಒಟ್ಟು 16.69 ಲಕ್ಷ ಹಣವನ್ನು ಆತ ಹೇಳಿದ್ದ ಖಾತೆಗೆ ವರ್ಗಾಯಿಸಿದ್ದಾರೆ.
ಹೀಗೆ ಹಣ ವರ್ಗಾವಣೆಯಾದ ಬೆನ್ನಲ್ಲಿ ಚಾಟಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ, ಜತೆಗೆ ಯಾವ ಫೋನ್ ಕರೆ ಸಹ ಬರಲಿಲ್ಲ. ಕಸ್ಟಮ್ಸ್ ಅಧಿಕಾರಿ ಎಂದು ಹೇಳಿ ಕರೆ ಮಾಡಿದ್ದ ವ್ಯಕ್ತಿಯ ನಂಬರ್ ಸಹ ಸ್ವಿಚ್ ಆಫ್ ಆಗಿತ್ತು. ಆಗ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದಿದೆ, ಆಘಾತಗೊಂಡ ಆಕೆ ಮಂಗಳೂರು ನಗರ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com