ಕಲಬುರಗಿ: 75 ಶಾಲೆಗಳಲ್ಲಿ ಇರುವುದು ಒಬ್ಬೊಬ್ಬರೇ ಶಿಕ್ಷಕರು!

ರಾಜ್ಯದಲ್ಲಿರುವ ಏಕ ಶಿಕ್ಷಕ ಶಾಲೆಗಳನ್ನು ಮುಚ್ಚಬೇಕೆಂಬ ಪ್ರಸ್ತಾವನೆ ಅನುಷ್ಠಾನಕ್ಕೆ ಬಂದರೇ ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ...
ರಾಲ್ಕೋಡ್ ನಲ್ಲಿರುವ ಸರ್ಕರಾ
ರಾಲ್ಕೋಡ್ ನಲ್ಲಿರುವ ಸರ್ಕರಾ
ಕಲಬುರಗಿ: ರಾಜ್ಯದಲ್ಲಿರುವ ಏಕ ಶಿಕ್ಷಕ ಶಾಲೆಗಳನ್ನು ಮುಚ್ಚಬೇಕೆಂಬ ಪ್ರಸ್ತಾವನೆ ಅನುಷ್ಠಾನಕ್ಕೆ ಬಂದರೇ ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ನಿಲುಕದನಕ್ಷತ್ರವಾಗಿಯೇ ಉಳಿಯುತ್ತದೆ. 
ಈ ಭಾಗದಲ್ಲಿರುವ ಸುಮಾರು 75 ಶಾಲೆಗಳಲ್ಲಿ ಸುಮಾರು 100 ವಿದ್ಯಾರ್ಥಿಗಳಿದ್ದು, ಆ ಶಾಲೆಗಳಿಗೆ ಒಬ್ಬರೇ ಒಬ್ಬರು ಖಾಯಂ  ಶಿಕ್ಷಕರಿದ್ದಾರೆ.
ಬೀದರ್, ಕಲಬುರಗಿ ಯಾದಗಿರಿ, ಕೊಪ್ಪಳ, ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಲ್ಲಿರುವ ಈ ಶಾಲೆಗಳು 2017-18ನೇ ಸಾಲಿನಲ್ಲಿಯೂ ಏಕ ಶಿಕ್ಷಕರನ್ನೇ ಹೊಂದಿದೆ. 
ಮಾಹಿತಿಗಳ ಪ್ರಕಾರ ಈ ಭಾಗದಲ್ಲಿ ಯಾದಗಿರಿಯ. ಶೋರಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 16 ಶಾಲೆಗಳಲ್ಲಿ ಖಾಯಂ ಏಕ ಶಿಕ್ಷಕರಿದ್ದಾರೆ, ಶಹಾರಪುರದಲ್ಲಿ 8 ಹಾಗೂ ಯಾದಗಿರಿಯಲ್ಲಿ 1 ಶಾಲೆ ಇದೆ.
ಕಲಬುರಗಿಯ ಜೇವರ್ಗಿ ತಾಲೂಕಿನ ಚಿತ್ತಾಪುರ ಮತ್ತು ಚಿಂಚೋಳಿಗಳಲ್ಲಿ ತಲಾ ಎರೆಡರೆಡು, ಅಪ್ಜಲಪುರ ಮತ್ತು ಆಳಂದ ತಾಲೂಕಿನಲ್ಲಿ ತಲಾ ಒಂದೊಂದು, ರಾಯಚೂರು ಜಿಲ್ಲೆಯಲ್ಲಿ  7 ರಾಯಚೂರಿನಲ್ಲಿ 4 ಮತ್ತು ಲಿಂಗಸಗೂರಿನಲ್ಲಿ 2 ಶಾಲೆಗಳಿವೆ.
ಕೊಪ್ಪಳದಲ್ಲಿ  3, ಬಳ್ಳಾರಿಯ ಸಿರಗುಪ್ಪದಲ್ಲಿ 5, ಸಂಡೂರು ಹೊಸಪೇಟೆ ಮತ್ತು ಬಳ್ಳಾರಿತಾಲೂಕುಗಳಲ್ಲಿ ತಲಾ ಒಂದೊಂದು ಶಾಲೆಗಳಿವೆ, 40:1 ಅನುಪಾತದಲ್ಲಿ  ಶಿಕ್ಷಕರನ್ನು ನೇಮಿಸಬೇಕೆಂಬ ಸರ್ಕಾರದ ಆದೇಶವಿದೆ.  ಆದರೆ ಅತಿಥಿ ಶಿಕ್ಷಕರನ್ನು ಇಲ್ಲಿ ಫಿಕ್ಸ್ ಮಾಡಿಲ್ಲ,
ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅವಕಾಶವಿದೆ, ಕಲೆವು ಏಕ ಶಿಕ್ಷಕ ಶಾಲೆಗಳಲ್ಲಿ ಈಗಾಗಲೇ ನೇಮಕ ಮಾಡಲಾಗಿದೆ ಎಂದು ಸಂಸ್ಕಾರ ಪರಿಸ್ಥಾನಿ ನಿರ್ದೇಶಕವಿಥಲ್ ಚಿಕಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com