ಮೈಸೂರು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಬ್ಯುಟಿಷಿಯನ್ ಮಹಿಳೆಯ ಶವ ಪತ್ತೆ

ಬ್ಯುಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಬ್ಯುಟಿಷಿಯನ್ ಮಹಿಳೆಯ ಶವ ಪತ್ತೆ
ಮೈಸೂರು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಬ್ಯುಟಿಷಿಯನ್ ಮಹಿಳೆಯ ಶವ ಪತ್ತೆ
ಮೈಸೂರು: ಬ್ಯುಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ  ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಶವ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೈಸೂರಿನ ದಾಮೋದರ ಬಡಾವಣೆ ನಿವಾಸಿಯಾದ ರಮ್ಯಾ(25) ಮೃತ ದುರ್ದೈವಿ. ಮೂಲತಃ ಚೆನ್ನರಾಯಪಟ್ಟಣದ ಜನಿವಾರ ಗ್ರಾಮದ ನಿವಾಸಿ ರಮ್ಯಾ 6 ವರ್ಷದ ಕೆಳಗೆ ಆನಂದ್ ಅವರನ್ನು ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ವೈಮನಸ್ಯ ಉಂಟಾದ ಕಾರಣ ಕಳೆದ 2 ವರ್ಷದಿಂದ ಅವರು ಬೇರೆಯಾಗಿ ವಾಸಿಸುತ್ತಿದ್ದರು.
ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ಬ್ಯುಟೀಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮ್ಯಾ ಇತ್ತೀಚಿನ ದಿನಗಳಲ್ಲಿ ಸುನೀಲ್ ಎನ್ನುವಾತನೊಡನೆ ಸ್ನೇಹ ಬೆಳೆಸಿದ್ದರು. ಅವರಿಬ್ಬರೂ ಒಟ್ಟಿಗೆ ವಾಸವಾಗಿದ್ದರು ಎನ್ನಲಾಗಿದೆ.
ಸೋಮವಾರ ತಡರಾತ್ರಿ ರಮ್ಯಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಕೆಯ ಜತೆಗಾರ ಸುನೀಲ್ ಅವಳನ್ನು ಹತ್ಯೆ ಮಾಡಿದ್ದಾನೆ ಎಂದು ರಮ್ಯಾ ಪೋಷಕರು ಪೋಲೀಸರಿಗೆ ನಿಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com