ಬೆಳಗಾವಿ: ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ ಪೋಷಕರು!

ಹೆಣ್ಣು ಮಗು ಹುಟ್ಟಿತೆಂಬ ಕಾರಣಕ್ಕಾಗಿ ಪೋಷಕರು ಜೀವಂತ ಅಂತ್ಯಕ್ರಿಯೆ ಮಾಡಲೆತ್ನಿಸಿದ ಘಟನೆ ನಗರದ ಶಹಾಪುರದ ರುದ್ರಭೂಮಿಯಲ್ಲಿ ನಡೆದಿದೆ....
ಮಗುವಿನ ಸಮಾಧಿಗಾಗಿ ತೋಡಿದ್ದ ಹಳ್ಳ
ಮಗುವಿನ ಸಮಾಧಿಗಾಗಿ ತೋಡಿದ್ದ ಹಳ್ಳ
Updated on
ಬೆಳಗಾವಿ:  ಹೆಣ್ಣು ಮಗು ಹುಟ್ಟಿತೆಂಬ ಕಾರಣಕ್ಕಾಗಿ ಪೋಷಕರು ಜೀವಂತ ಅಂತ್ಯಕ್ರಿಯೆ ಮಾಡಲೆತ್ನಿಸಿದ ಘಟನೆ ನಗರದ ಶಹಾಪುರದ ರುದ್ರಭೂಮಿಯಲ್ಲಿ ನಡೆದಿದೆ.
ಶನಿವಾರ ಘಟನೆ ನಡೆದಿದ್ದು ಮಂಗಳವಾರ ಬೆಳಕಿಗೆ ಬಂದಿದೆ.  ಬೆಳಗ್ಗೆ 11 ಗಂಟೆಗೆ ಬಂದ ಇಬ್ಬರು ಯುವಕರು 2 ತಿಂಗಳ ಮಗುವಿನ ಸಮಾಧಿಗೆ ಗುಂಡಿ ತೋಡುವಂತೆ ಕೇಳಿಕೊಂಡರು ಎಂದು ಸ್ಮಶಾನದ ವಾಚ್ ಮನ್  ರಾಜೇಶ್ ತಿಳಿಸಿದ್ದಾರೆ, 
ಮಧ್ಯಾಹ್ನ 1.15ರ ಸುಮಾರಿಗೆ ಸ್ಮಶಾನಕ್ಕೆ ಆರು ಮಹಿಳೆಯರು ಸೇರಿದಂತೆ 10 ಮಂದಿ ಮಗುವಿನೊಂದಿಗೆ ಬಂದಿದ್ದಾರೆ, ಮಗುವನ್ನು ಬಟ್ಟೆಯಿಂದ ಗಟ್ಟಿಯಾಗಿ ಸುತ್ತಲಾಗಿತ್ತು, ಬಟ್ಟೆ ಸಡಿಲಿಸಲು ಆತ ಯತ್ನಿಸಿದಾಗ, ಕೈಕಾಲು ಗಳು ಆಡುತ್ತಿರುವುದನ್ನು ನೋಡಿ ಆತ ಶಾಕ್ ಆಗಿದ್ದಾನೆ, ಮಗು ಬದುಕಿದೆ ಎಂದು  ಮಗುವನ್ನು ತಂದವರಿಗೆ ಆತ ಕೂಗಿ ಹೇಳಿದ್ದಾನೆ 
ಮಗುವಿಗೆ ತಲೆಯಲ್ಲಿ ಗಾಯವಾಗಿದ್ದು, ವೈದ್ಯರು ಮಗು ಸತ್ತಿದೆ ಎಂದು ಹೇಳಿದ್ದಾರೆಂದು ಅಲ್ಲಿದ್ದವರು ತಿಳಿಸಿದ್ದಾರೆ, ಆದರೆ ಅವರ ಮಾತಿನಿಂದ ಶಂಕೆಗೊಂಡ ಆತ ಅಗುವನ್ನು ಸಮಾಧಿ ಮಾಡಲು ಒಪ್ಪಲಿಲ್ಲ,. ಬದಲಾಗಿ ಪಕ್ಕದಲ್ಲೆ ಇದ್ದ ಸ್ಮಶಾನದ ಟ್ರಸ್ಟ್ ಸದಸ್ಯ. ವಿಜಯ ಸಾವಂತ್ ಎಂಬುವರಿಗೆ ಸುದ್ದಿ ಮುಟ್ಟಿಸಿದ್ದಾನೆ.
ಕೂಜಲೇ ಅಲ್ಲಿಗೆ ಬಂದ ಆತ ಕಾರಿನಲ್ಲಿ ಕೂತಿದ್ದ ಮಗುವಿನ ತಾಯಿಯನ್ನು ವಿಚಾರಿಸಿದ್ದಾನೆ, ಮಗುವ್ವನು ಬೇರೆ ಮಹಿಳೆಯರಿಗೆ ಕೊಟ್ಟು ತಾಯಿ ಕಾರಿನಲ್ಲಿ ಅಳುತ್ತಾ ಕೂತಿದ್ದಳು ಕೂಡಲೇ ಮಗುವನ್ನು ಅಲ್ಲಿಗೆ ತಂದ ಆತ ಅದಕ್ಕೆ ಹಾಲುಣಿಸುವಂತೆ ಹೇಳಿದ್ದಾನೆ, ಆಕೆ ಹಾಲು ನೀಡಿದಾಗ ಮಗು ಕಣ್ಣಿ ಬಿಟ್ಟು ಸುತ್ತ ಮುತ್ತ ನೋಡಲು ಶುರು ಮಾಡಿತು. ನಂತರ ಅವರು ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಪರೀಕ್ಷಿಸುವಂತೆ ಹೇಳಿದ್ದಾರೆ,
ತಾವು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದು, ಮಗು ಮಾರಣಾಂತಿಕ ರೋಗದಿಂದ ಬಳಲುತ್ತಿದೆ ಎಂದು ಹೇಳಿದ್ದಾರೆ, ಹೀಗಾಗಿ ಸಮಾಧಿ ಮಾಡುವಂತೆ ಆತನಲ್ಲಿ ಕೇಳಿದ್ದಾರೆ.  ಆದರೆ ಆತ ಅದ್ದಕ್ಕೊಪ್ಪದ ಕಾರಣಸುಮಾರು ಅರ್ಧ ಗಂಟೆ ಕಾದು ನಂತರ ಮಗುವಿನೊಂದಿಗೆ ಸ್ಮಶಾನದಿಂದ ನಾಪತ್ತೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com