ಮೈಸೂರು ವಿವಿ
ಮೈಸೂರು ವಿವಿ

ಕೆಲಸ ಕಳೆದುಕೊಳ್ಳುವ ಭಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ 120 ಸಿಬ್ಬಂದಿ !

ಪ್ರೊ.ಕೆ.ಎಸ್ ರಂಗಪ್ಪ ಮೈಸೂರು ವಿವಿ ಉಪಕುಲಪತಿಯಾಗಿದ್ದ ವೇಳೆ ನೇಮಕವಾಗಿದ್ದ ಸುಮಾರು 120 ಮಂದಿ ಸಿಬ್ಬಂದಿ ಭವಿಷ್ಯದ ಮೇಲೆ ತೂಗು ಗತ್ತಿ ...
ಬೆಂಗಳೂರು: ಪ್ರೊ.ಕೆ.ಎಸ್ ರಂಗಪ್ಪ ಮೈಸೂರು ವಿವಿ ಉಪಕುಲಪತಿಯಾಗಿದ್ದ ವೇಳೆ ನೇಮಕವಾಗಿದ್ದ ಸುಮಾರು 120 ಮಂದಿ ಸಿಬ್ಬಂದಿ ಭವಿಷ್ಯದ ಮೇಲೆ ತೂಗು ಗತ್ತಿ ನೇತಾಡುತ್ತಿದೆ. ಗವರ್ನರ್ ವಜೂಬಾಯಿ ವಾಲಾ 2016ರ ಡಿಸೆಂಬರ್ ನಲ್ಲಿ ನೇಮಕವಾಗಿರುವ ಎಲ್ಲಾ ಸಿಬ್ಬಂದಿಯನ್ನು ವಜಾ ಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಆದೇಶಿಸಿದ್ದಾರೆ.ಗ ವರ್ನರ್ ವಜೂಬಾಯಿ ವಾಲಾ ರಚಿಸಿದ್ದ ಸಮಿತಿ, ಆ ಆದೇಶ ಹೊರಡಿಸಿದೆ.
ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಜೂನ್‌ 20ರಂದು ಪತ್ರ ಬರೆದು ಈ ಆದೇಶ ಹೊರಡಿಸಿದ್ದಾರೆ.
ಈ ನೇಮಕ ಪ್ರಕ್ರಿಯೆಗೆ ಕಾರಣಕರ್ತರಾದ ಹಾಗೂ ಆಡಳಿತಾತ್ಮಕ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ವಿಶ್ವವಿದ್ಯಾನಿಲಯದ ಅಧಿಕಾರಿ, ಸಿಬ್ಬಂದಿ ಯನ್ನು ಗುರುತಿಸಿ ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ಹಾಗೂ ಇತರ ಅನ್ವಯಿಕ ಕಾನೂನುಗಳಡಿ ಒಂದು ತಿಂಗಳ ಒಳಗಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಈ ಪ್ರಕರಣದಲ್ಲಿ ಕೈಗೊಂಡ ಕ್ರಮದ ಬಗ್ಗೆ ಒಂದು ತಿಂಗಳ ಒಳಗಾಗಿ ಅನುಸರಣಾ ವರದಿ ನೀಡುವಂತೆ ರಾಜ್ಯ ಸರಕಾರವು ಮೈಸೂರು ವಿವಿಗೆ ಸೂಚಿಸಿದೆ. ಅಲ್ಲದೆ ಭವಿಷ್ಯದಲ್ಲಿ ವಿವಿಯಿಂದ ಕೈಗೊಳ್ಳಬಹುದಾದ ನೇಮಕ ಪ್ರಕ್ರಿಯೆಯಲ್ಲಿ ನಿಯಮಗಳು, ನೇಮಕ ಮಾರ್ಗಸೂಚಿಗಳು, ಮೀಸಲು ಕಾರ್ಯನೀತಿಯನ್ನು ಕಡ್ಡಾಯವಾಗಿ ಅನುಸರಿಸ ಬೇಕೆಂದು ಸರಕಾರ ಕಟ್ಟಪ್ಪಣೆ ಮಾಡಿದೆ. 
ಅದರಂತೆ ಸರ್ಕಾರ ಈ ಪ್ರಕರಣವನ್ನು ಭ್ರಷ್ಟಚಾರಾ ವಿರೋಧಿ ಕಾಯಿದೆ ಅಡಿ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಿದೆ, ಜೊತೆಗೆ 2016ರ ಡಿಸೆಂಬರ್ ನಲ್ಲಿ ನೇಮಕವಾಗಿದ್ದವರನ್ನು ಕೆಲಸದಿಂದ ವಜಾಗೊಳಿಸುವಂತೆ ಸೂಚಿಸಿದೆ.
ರಾಜ್ಯಪಾಲರು ವಿಚಾರಣಾ ವರದಿಯನ್ನು ಪರಿಶೀಲಿಸಿದ ನಂತರ ಬೋಧಕೇತರ ಸಿಬ್ಬಂದಿ ನೇಮಕ ಸಂಪೂರ್ಣ ಕಾನೂನು ಬಾಹಿರವಾಗಿರು ವುದು ಕಂಡು ಬಂದಿದೆ. ಇಂತಹ ನೇಮಕ ಮೀಸಲು ನೀತಿಯ ಉಲ್ಲಂಘನೆಯೂ ಆಗಿದೆ. ವಿಶ್ವ ವಿದ್ಯಾ ನಿಲಯದಂತಹ ಸಂಸ್ಥೆಗಳು ನೇಮಕ ಮಾಡಿಕೊಳ್ಳುವಾಗ ಕಾಯ್ದೆ, ಕಾನೂನು ಹಾಗೂ ಮೀಸಲು ನೀತಿಯನ್ನು ಅನುಸರಿಸ ಬೇಕು. ಇಂತಹ ಕಾನೂನು ಬಾಹಿರ ನೇಮಕ ಗಳು ಮುಂದುವರಿಯಲು ಬಿಡಬಾ ರದು. ವಿಶ್ವವಿದ್ಯಾನಿಲಯದ ಆಡಳಿತದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳ ಬೇಕಾಗುತ್ತದೆ ಎಂದು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಈ ಪತ್ರದಲ್ಲಿ ಹೇಳಿದ್ದರು.

Related Stories

No stories found.

Advertisement

X
Kannada Prabha
www.kannadaprabha.com