• Tag results for ಕೆಲಸ

ಜುಲೈ 2021ರವರೆಗೂ ಮನೆಯಿಂದಲೇ ಕೆಲಸ ಮಾಡಿ: ಉದ್ಯೋಗಿಗಳಿಗೆ ಗೂಗಲ್ ನಿರ್ದೇಶನ

ವಿಶ್ವದ ಅತ್ಯಂತ ವಿಶ್ವಾಸಾರ್ಹ ಇಂಟರ್ನೆಟ್ ಸರ್ಚ್ ಎಂಜಿನ್ ಸಂಸ್ಥೆ  ಗೂಗಲ್ ತನ್ನ 200,000 ಉದ್ಯೋಗಿಗಳು ಮತ್ತು ಗುತ್ತಿಗೆದಾರರು 2021 ಜೂನ್ ವರೆವಿಗೂ  ಮನೆಯಿಂದ ಕೆಲಸ ಮಾಡಬೇಕೆಂದು ನಿರ್ದೇಶಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಮ್ಮ ಸಂಸ್ಥೆಯ ಉದ್ಯೋಗಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಮಹತ್ವದ ತೀರ್ಮಾನಕ್ಕೆ ಬಂದಿದೆ.  

published on : 28th July 2020

ಕೊರೋನಾ ಎಫೆಕ್ಟ್: 'ರೈತರು ಬೇಕಾಗಿದ್ದಾರೆ'; ಕೃಷಿ ಕ್ಷೇತ್ರದತ್ತ ಹೊರಳುತ್ತಿದೆ ಜನರ ಆಸಕ್ತಿ!

ಪ್ರತಿ ಸಮಸ್ಯೆಯೊಳಗೆ ಒಂದು ಅವಕಾಶವಿರುತ್ತದೆ ಎನ್ನುತ್ತಾರೆ. ಕೋವಿಡ್-19 ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ತಂದೊಡ್ಡಿರಬಹುದು. ಆದರೆ ಇದು ಕೆಲವರ ಬಾಳಲ್ಲಿ ಹೊಸ ಅವಕಾಶಕ್ಕೆ, ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಇದು ಸಾಕಷ್ಟು ಅವಕಾಶಗಳನ್ನು ಹೊಸದಾಗಿ ಸೃಷ್ಟಿಮಾಡುತ್ತಿದೆ.

published on : 13th June 2020

ಕೊರೋನಾ ಭೀತಿ ನಡುವೆಯೂ ಸಾಮಾಜಿಕ ಅಂತರ ಮರೆತ ಬಾಗಲಕೋಟೆ ಜಿಲ್ಲೆ ಸಿಇಒ; ನರೇಗಾ ಕೆಲಸಗಾರರ ಜಾತ್ರೆ

ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು.

published on : 8th June 2020

ಶ್ರೀರಂಗಪಟ್ಟಣ: 1200 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ ಗಾರ್ಮೆಂಟ್ ಕಂಪನಿ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಗಾರ್ಮೆಂಟ್ ಉದ್ಯಮದ ಮೇಲೆ ತೀವ್ರ ರೀತಿಯ ಹೊಡೆತ ಬಿದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಗಾರ್ಮೆಂಟ್ ಕಂಪನಿಯೊಂದು ತನ್ನ 1200 ಕಾರ್ಮಿಕರನ್ನು ಕೆಲಸದಿಂದಲೇ ತೆಗೆದುಹಾಕಿದೆ.

published on : 7th June 2020

ಡಾಟಾ ಸ್ಟೋರೇಜ್ ಸಂಸ್ಥೆಯಿಂದ 500 ನೌಕರರ ಉದ್ಯೋಗಕ್ಕೆ ಕತ್ತರಿ! 

ಅಮೆರಿಕದ ಡಾಟಾ ಸ್ಟೋರೇಜ್ ಸಂಸ್ಥೆ ಸೀಗೇಟ್ ಟೆಕ್ನಾಲಜಿ ಜಾಗತಿಕ ಮಟ್ಟದಲ್ಲಿರುವ ತನ್ನ ಉದ್ಯೋಗಿಗಳ ಪೈಕಿ ಶೇ.1 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 

published on : 5th June 2020

ಕೆಲಸಕ್ಕೆ ಹಾಜರಾಗದ ಹಾಪ್‍ಕಾಮ್ಸ್ ನೌಕರರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ಕೋವಿಡ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿನಿಂದ ಕೆಲಸಕ್ಕೆ ಹಾಜರಾಗದ 150 ಜನ ಹಾಪ್‍ಕಾಮ್ಸ್ ನೌಕರರ ವಿರುದ್ಧ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

published on : 2nd June 2020

ಭದ್ರಾ ಹುಲಿ ಸಂರಕ್ಷಣಾ ಮೀಸಲು ಅರಣ್ಯದ 40 ಸಿಬ್ಬಂದಿ ಉದ್ಯೋಗಕ್ಕೆ ಕುತ್ತು!

ಉದ್ಯೋಗದಿಂದ ಯಾರನ್ನು ತೆಗೆಯಬಾರದು ಎಂದು ಕೇಂದ್ರದ ಸಲಹ ಮಂಡಳಿ ಸೂಚಿಸಿದ್ದರೂ ಭದ್ರಾ ಹುಲಿ ಮೀಸಲು ಅರಣ್ಯ ತನ್ನ 40 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.

published on : 1st June 2020

ಲಾಕ್‌ಡೌನ್‌ ನಿಂದಾಗಿ ಕೆಲಸ ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆ

ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ತೀವ್ರ ಖಿನ್ನತೆಗೊಳಗಾಗಿ ಆತ್ಮಹತ್ಯೆಕ್ಕೆ ಶರಣಾಗಿರುವ ಘಟನೆ ಈ ಜಿಲ್ಲೆಯ ತೆನುಘಾಟ್ ವ್ಯಾಪ್ತಿಯಲ್ಲಿ ನಡೆದಿದೆ.

published on : 30th May 2020

ದುಬೈಯಲ್ಲಿ ಕೆಲಸ ತೊರೆದು ತಾಯಿ ನೋಡಿಕೊಳ್ಳಲು ಬಂದ, ಕ್ವಾರಂಟೈನ್ ನಲ್ಲಿದ್ದಾಗ ಬಂತು ಹೆತ್ತವಳ ಸಾವಿನ ಸುದ್ದಿ!

ದುಬೈಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸ ತೊರೆದು ಭಾರತದಲ್ಲಿದ್ದ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ತವರಿಗೆ ಬಂದಿದ್ದಾರೆ. ಆದರೆ ಕೆಲವು ಬಾರಿ ಜೀವನ ನಾವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಕೊವಿಡ್-19 ಪರಿಣಾಮ ದೆಹಲಿಯಲ್ಲಿ 14 ದಿನ ಕ್ವಾರಂಟೈನ್ ಗೆ ಒಳಗಾಗಿದ್ದು, ಕ್ವಾರಂಟೈನ್ ಮುಗಿಯುವ ಮೊದಲೇ ತಾಯಿಯ ಸಾವಿನ ಸುದ್ದಿ ಬಂದಿದೆ.

published on : 25th May 2020

ಕಾರ್ಮಿಕರಿಗೆ 10 ತಾಸು ಕೆಲಸಕ್ಕೆ ಅವಕಾಶ: ರಾಜ್ಯ ಸರ್ಕಾರ ಆದೇಶ

ಕಾರ್ಖಾನೆಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 8ರ ಬದಲು 10 ತಾಸು ಕೆಲಸ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. 

published on : 23rd May 2020

ದೆಹಲಿ ಏಮ್ಸ್ ಆಸ್ಪತ್ರೆಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೋನಾದಿಂದ ಸಾವು

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ರೆಸಿಡೆಂಟ್ ವೈದ್ಯರ ಸಂಘ(ಆರ್ ಡಿಎ) ತಿಳಿಸಿದೆ.

published on : 22nd May 2020

ಹೊಸ ಕಾಮಗಾರಿ ಪ್ರಾರಂಭಿಸಲು ಆರ್ಥಿಕ ಇಲಾಖೆಯ ಅನುಮತಿ ಕಡ್ಡಾಯ: ಗೋವಿಂದ ಎಂ ಕಾರಜೋಳ

ಪ್ರಸಕ್ತ ಸಾಲಿನಲ್ಲಿ ಯಾವುದೇ ನೂತನ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ಕಡ್ಡಾಯವಾಗಿ ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಲೋಕೋಯೋಗಿ ಇಲಾಖೆಯ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.

published on : 20th May 2020

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವರ್ಷದಲ್ಲಿ 15 ದಿನ ವರ್ಕ್ ಫ್ರಂ ಹೋಂ?

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುವಂತಾಗಿದೆ. ಇನ್ನು ಕೊರೋನಾ ನಂತರವೂ ಕೇಂದ್ರ ಸರ್ಕಾರ ತನ್ನ ನೌಕರಿಗಾಗಿ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಬಗ್ಗೆ ಕರಡು ರೂಪಿಸಿದೆ.

published on : 14th May 2020

ಕೊರೋನಾ ಸಾಂಕ್ರಾಮಿಕ: ಶಾಶ್ವತವಾಗಿ 'ಮನೆಯಿಂದಲೇ ಕೆಲಸ' ಮಾಡಿ ಎಂದ ಟ್ವಿಟರ್!

ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕು ಕಡಿಮೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತಿರುವ ಆತಂಕದ ನಡುವೆಯೇ ತನ್ನ ಸಿಬ್ಬಂದಿಗಳ ಸುರಕ್ಷತೆಗೆ ಮುಂದಾಗಿರುವ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಶಾಶ್ವತವಾಗಿ 'ಮನೆಯಿಂದಲೇ ಕೆಲಸ'  ಮಾಡುವಂತೆ ಸಿಬ್ಬಂದಿಗಳಿಗೆ ಅನುಮತಿ ನೀಡಿದೆ.

published on : 13th May 2020

ಬೇರೆ ರಾಜ್ಯದಲ್ಲಿರುವ ಕರ್ನಾಟಕದ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಒದಗಿಸಿ:ಸಿದ್ದರಾಮಯ್ಯ ಆಗ್ರಹ

ಬೇರೆ ಬೇರೆ  ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಕಾರ್ಮಿಕರೂ ಇಲ್ಲಿಗೆ ಬರಲು  ಕಷ್ಟಪಡುತ್ತಿದ್ದಾರೆ. ಸ್ವಂತ ಊರುಗಳನ್ನು ತಲುಪಲು ಸರ್ಕಾರ ಎಲ್ಲ ಕಾರ್ಮಿಕರಿಗೆ ಕೂಡಲೇ  ವ್ಯವಸ್ಥೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

published on : 10th May 2020
1 2 3 >