ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಭಾಗಗಳಾಗಿ ವಿಭಜಿಸಬೇಕು ಹಾಗೂ ಬೆಂಗಳೂರಿನ ಸಮಗ್ರತೆಯನ್ನು ಕಾಪಾಡಲು ಗ್ರೇಟರ್ ಬೆಂಗಳೂರು ಕಾರ್ಪೋರೇಷನ್ ಅಡಿಯಲ್ಲಿ ತರಬೇಕು ಎಂದು ಬಿಬಿಎಂಪಿ ಪುನರ್ ವಿಂಗಡನಾ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಅವರಿಗೆ ವರದಿ ಸಲ್ಲಿಸಿದೆ,
ನವೆಂಬರ್ 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಿಬಿಎಂಪಿ ವಿಭಜನೆ ಸಂಬಂಧ ಅಧ್ಯಯನ ನಡೆಸಲು ಸಮಿತಿ ರಚಿಸಿತ್ತು, ನಿವೃತ್ತ ಐಎಎಸ್ ಅಧಿಕಾರಿಗಳಾದ ಪಾಟೀಲ್, ನಗರ ತಜ್ಞ ವಿ. ರವಿಚಂದ್ರ ಮತ್ತು ವಿ ಮಣಿವಣ್ಣನ್ ಇದರ ಸದಸ್ಯರಾಗಿದ್ದರು,
ಹಳೆ ನಗರ ಪ್ರದೇಶದಲ್ಲಿ 30000 ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಪುನರ್ ವಿಂಗಡಣೆ ಮಾಡಿ 400 ವಾರ್ಡ್ ರಚನೆಗೂ ಸಮಿತಿ ಶಿಫಾರಸ್ಸು ಮಾಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಆಫ್ ಇಂಡಿಯಾಗೆ ಜನರಿಂದಲೇ ನೇರವಾಗಿ ಮೇಯರ್ ಇನ್ ಕೌನ್ಸಿಲ್ ಆಯ್ಕೆಯಾಗಬೇಕು ಎಂದು ಪಾಟೀಲ್ ಹೇಳಿದ್ದಾರೆ.