
ಬೆಂಗಳೂರು: ನೌಕರರ ಚುನಾವಣಾ ಗುರುತು ಪತ್ರದ ಸಂಖ್ಯೆಯನ್ನು ಸರ್ಕಾರದ ದಾಖಲೆಗಳಿಗೆ ಸಂಪರ್ಕಿಸುವಂತೆ ಎಲ್ಲಾ ಸರ್ಕಾರಿ ನೌಕರರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್) ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ.
ಮೂರು ದಿನಗಳೊಳಗೆ ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಗೆ ಗುರುತು ಪತ್ರದ ದಾಖಲೆಗಳನ್ನು ನೀಡಬೇಕೆಂದು ಮತ್ತು ಒಂದು ವೇಳೆ ವಿಫಲವಾದರೆ ನೌಕರರ ಮಾರ್ಚ್ ತಿಂಗಳ ವೇತನವನ್ನು ಬಿಡುಗಡೆಮಾಡದೆ ಹಿಡಿದಿಟ್ಟುಕೊಳ್ಳಲಾಗುವುದು ಎಂದು ನೌಕರರಿಗೆ ಎಚ್ಚರಿಕೆ ನೀಡಲಾಗಿದೆ.
ಈ ವರ್ಷ ರಾಜ್ಯ ಚುನಾವಣಾ ಆಯೋಗ ಚುನಾವಣಾ ಕರ್ತವ್ಯಕ್ಕೆ 3.25 ಲಕ್ಷ ನೌಕರರ ಅಗತ್ಯವನ್ನು ಹೊಂದಿದೆ. ಡಿಪಿಎಆರ್ ಅಧೀನ ಕಾರ್ಯದರ್ಶಿ ಎಸ್.ವಿ.ಶಂಕರ್ ಎಲ್ಲಾ ಉಪ ಕಾರ್ಯದರ್ಶಿಗಳಿಗೆ ಮತ್ತು ಸಹ-ನಿರ್ದೇಶಕರುಗಳಿಗೆ ಆದೇಶ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.
ತಮ್ಮ ವೇತನ ದಾಖಲೆಗಳಿಗೆ ಚುನಾವಣಾ ಗುರುತು ಪತ್ರವನ್ನು ಜೋಡಿಸುವಂತೆ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶ ನೀಡಲಾಗಿದೆ. ಮುಖ್ಯ ಚುನಾವಣಾಧಿಕಾರಿ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಂಕರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
Advertisement