ಈ ವೇಳೆ ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆ ಪ್ರಸ್ತಾವವನ್ನು ಸಚಿವರಾದ ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ್ ತೀವ್ರವಾಗಿ ವಿರೋಧಿಸಿದರು. ಈ ನಿರ್ಧಾರ ಕೈಗೊಂಡರೆ ಸಚಿವ ಸ್ಥಾನ ತೊರೆಯುವುದಾಗಿಯೂ ಇವರು ಹೇಳಿದರು. ಸಚಿವರಾದ ಎಂ.ಬಿ. ಪಾಟೀಲ್, ಬಸವರಾಜ ರಾಯರೆಡ್ಡಿ ಅವರು ತಜ್ಞರ ಸಮಿತಿ ವರದಿಯಂತೆ ಸ್ವತಂತ್ರ ಧರ್ಮ ಸ್ಥಾಪನೆಗೆ ತೀರ್ಮಾನ ಕೈಗೊಳ್ಳುವಂತೆ ಪಟ್ಟು ಹಿಡಿದರು .