ನನ್ನ ಮಗನ ಸಾವಿಗೆ ಸಿಎಂ ಕಾರಣ: ಅನುರಾಗ್ ತಿವಾರಿ ತಂದೆ ಆರೋಪ

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದೆ....
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದೆ.
ಅನುರಾಗ್ ತಿವಾರಿ ಅವರ ತಂದೆ ಬಿ ಎನ್ ತಿವಾರಿ, ತಮ್ಮ ಮಗನ ಹತ್ಯೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. 
ನನ್ನ ಮಗ ಅತ್ಯಂತ ಪ್ರಾಮಾಣಿಕ. ಭ್ರಷ್ಟರಿಗೆ ನನ್ನ ಮಗ ಇಷ್ಟವಾಗುತ್ತಿರಲಿಲ್ಲ. ಅಂತಹ ಭ್ರಷ್ಟರೇ ನನ್ನ ಮಗನನ್ನು ಸಂಚು ಹೂಡಿ ಹತ್ಯೆ ಮಾಡಿದ್ದಾರೆ ಎಂದು ಬಿ ಎನ್ ತಿವಾರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಅನುರಾಗ್ ತಿವಾರಿ ಕಳೆದ ಮೇ 17ರಂದು ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಹುಟ್ಟು ಹಬ್ಬ ಆಚರಿಸಲು ಲಖನೌಗೆ ಬಂದಿದ್ದ 36 ವರ್ಷ ತಿವಾರಿ ಅವರ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಸಾವಿರಾರು ಕೋಟಿ ರೂಗಳ ಅವ್ಯವಹಾರವನ್ನು ಬಯಲಿಗೆಳೆಯಲು ಅನುರಾಗ್ ತಿವಾರಿ ಮುಂದಾಗಿದ್ದರು ಎಂದು ಬಿಜೆಪಿ ಆರೋಪಿಸಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಅನುರಾಗ್ ತಿವಾರಿ ಸಹೋದರ ಮಯಾಂಕ್ ತಮ್ಮ ತಂದೆಯ ಆರೋಪವನ್ನು ನಿರಾಕರಿಸಿದ್ದಾರೆ. ನನ್ನ ತಂದೆ 75 ವರ್ಷ ವಯಸ್ಸಿನವರು, ಅವರಿಗೆ ತಮ್ಮ ಮಗನ ಸಾವಿನ ಬಗ್ಗೆ ಅಸಮಾಧಾನವಿದೆ ಹಾಗಾಗಿ ಹೇಳಿಕೆ ನೀಡಿದ್ದಾರೆ, ಅವರಿಗೆ ಸರ್ಕಾರದ ಸಹಾಯ ಬೇಕಿದೆ, ನಾವು ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ, ಮಾಧ್ಯಮಗಳು ಇಲ್ಲಿಯವರೆಗೂ ಉಲ್ಟಾ-ಸೀದಾ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದಾರೆ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com