ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೆ ಎಂಬಂತೆ " ನಿಲ್ಗಾಯ್ " ಪ್ರತ್ಯಕ್ಷ

ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೆ ಎಂಬಂತೆ ರಾಜ್ಯದಲ್ಲಿ ನಿಲ್ ಗಾಯ್ ಪ್ರತ್ಯಕ್ಷಗೊಂಡಿದೆ. ಭದ್ರಾ ಹುಲಿ ಸಂರಕ್ಷಿತಾರಣ್ಯದ ಮುತ್ತೊಡಿ ವಲಯದಲ್ಲಿ ನಿಲ್ ಗಾಯ್ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.
ನಿಲ್ಗಾಯ್
ನಿಲ್ಗಾಯ್

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಅಪರೂಪಕ್ಕೆ ಎಂಬಂತೆ ರಾಜ್ಯದಲ್ಲಿ ನಿಲ್ಗಾಯ್  ಪ್ರತ್ಯಕ್ಷಗೊಂಡಿದೆ. ಭದ್ರಾ ಹುಲಿ ಸಂರಕ್ಷಿತಾರಣ್ಯದ   ಮುತ್ತೊಡಿ ವಲಯದಲ್ಲಿ ನಿಲ್ಗಾಯ್ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

ಈ ಅರಣ್ಯದ ಸಪಾರಿ ರಸ್ತೆಯಲ್ಲಿ ಆರೋಗ್ಯಪೂರ್ಣವಾದ ನಿಲ್ಗಾಯ್  ನಡೆದು ಹೋಗಿದೆ. 1952ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಾಕೆರೆ ವಲಯದಲ್ಲಿ ಈ ರೀತಿಯ ಪ್ರಾಣಿ ಕಂಡುಬಂದಿತ್ತು. ಆದರೆ , ತದನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ದಿ ನ್ಯೂ  ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಭದ್ರಾ ಹುಲಿ ರಕ್ಷಿತಾರಣ್ಯದ ಅರಣ್ಯಾಧಿಕಾರಿ ಹೆಚ್. ಸಿ. ಕಾಂತರಾಜ್ ,ಇಂತಹ ಪ್ರಾಣಿಗಳು ಕಾಣಿಸಿಕೊಂಡದ್ದು ಆಶ್ಚರ್ಯ ಮೂಡಿಸಿದೆ. ಭದ್ರಾ ಅರಣ್ಯದಲ್ಲಿ ಆರೋಗ್ಯಕರವಾದ ಹುಲಿ, ಚಿರತೆಗಳಿವೆ. ಮೂರ್ನಾಲ್ಕು ದಿನಗಳಿಗೊಮ್ಮೆ ಪ್ರಾಣಿಗಳನ್ನು ವೀಕ್ಷಿಸಲಾಗುವುದು  ಅರಣ್ಯದಲ್ಲಿ ಪ್ರತಿ 2 ಚದರ ಕಿಲೋಮೀಟರ್ ಗೆ ಒಂದರಂತೆ ಕ್ಯಾಮರಾ ಅಳವಡಿಸಲಾಗಿದ್ದು, ಅದರಲ್ಲಿ ನಿಲ್ಗಾಯ್  ಪ್ರತ್ಯಕ್ಷಗೊಂಡಿದೆ ಎಂದು ತಿಳಿಸಿದ್ದಾರೆ.

ವನ್ಯಜೀವಿ ತಜ್ಞ ವಿ. ವೀರೇಶ್  ಮಾತನಾಡಿ, ನಿಲ್ಗಾಯ್  ಹೇಗೆ ಮುತ್ತೊಡಿ ಅರಣ್ಯ ಪ್ರವೇಶಿಸಿತ್ತು ಎಂಬ ಬಗ್ಗೆ ಪ್ರಶ್ನಿಸಿದ್ದಾರೆ.  ಮಾಂಸದ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ನಿಲ್ಗಾಯ್ ನ್ನು ಉತ್ತರ ಭಾಗದ ರಾಜ್ಯಗಳು ಸೇರಿದಂತೆ ಇತರೆಡೆ ಸಾಗಣೆ ಮಾಡಲಾಗುತ್ತಿದೆ. ಉರಸ್  ಆಚರಣೆ ಸಂದರ್ಭದಲ್ಲಿ ಬಾಬಾಬುಡನ್ ಗಿರಿ ಬೆಟ್ಟದಲ್ಲಿ ಈ ವನ್ಯಜೀವಿಯನ್ನು ತರಲಾಗಿತ್ತು. ಬಾಬಾಬುಡನ್ ಗಿರಿ ಬೆಟ್ಟಕ್ಕೆ ಮುತ್ತೊಡಿ ಅರಣ್ಯ ಹತ್ತಿರದಲ್ಲಿರುವುದರಿಂದ ಅಲ್ಲಿಂದ ತಪ್ಪಿಸಿಕೊಂಡು ಬಂದಿರಬಹುದೆಂದು ಹೇಳುತ್ತಾರೆ.

ಆದಾಗ್ಯೂ, ಮುತ್ತೊಡಿ ಅರಣ್ಯದಲ್ಲಿ ನಿಲ್ಗಾಯ್ ಕಾಣಿಸಿಕೊಂಡಿರುವುದು ಅರಣ್ಯದೊಳಗಿನ ಚೆಕ್ ಪೋಸ್ಟ್ ಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಮುತ್ತೊಡಿ ಅರಣ್ಯದಲ್ಲಿ ಕಳ್ಳ ಬೇಟೆಗಾರರ ಹಾವಳಿಯೂ ಹೆಚ್ಚಾಗಿದ್ದು, ಕಳೆದ ವರ್ಷ 23 ಬೇಟೆಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ನಿಟ್ಟಿನಲ್ಲಿಯೂ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com