ಮೈಸೂರು: ಒಡೆಯರ್ ಪರ ನೆಟಿಜನ್ ಗಳ ಪ್ರೀತಿ, ಅಭಿಮಾನ!

ಸಾಂಸ್ಕೃತಿಕ ನಗರಿ ಮೈಸೂರು ನಾಗರಿಕರು ಟ್ವಿಟ್ಟರ್ ನಲ್ಲಿ ಮೈಸೂರು ರಾಜ ವಂಶಸ್ಥರ ಬಗ್ಗೆ ಅಭಿಮಾನದ ಮಹಾಪೂರವನ್ನೇ ಹರಿಸಿದ್ದಾರೆ...
ಮೈಸೂರು ಅರಮನೆ
ಮೈಸೂರು ಅರಮನೆ
Updated on
ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರು ನಾಗರಿಕರು ಟ್ವಿಟ್ಟರ್ ನಲ್ಲಿ  ಮೈಸೂರು ರಾಜ ವಂಶಸ್ಥರ ಬಗ್ಗೆ ಅಭಿಮಾನದ ಮಹಾಪೂರವನ್ನೇ ಹರಿಸಿದ್ದಾರೆ. 
'ನಮ್ಮ ಒಡೆಯರ್ ನಮ್ಮ ಮೈಸೂರು- ಬಿಲ್ಟ್ ಮಾಡ್ರನ್ ಮೈಸೂರು'ಎಂಬ ಶೀರ್ಷಿಕೆಯಡಿ ಟ್ವಿಟ್ಟರ್ ನಲ್ಲಿ  ತಮ್ಮ ಪ್ರೀತಿ ತೋರಿದ್ದಾರೆ. ರಾಜ್ಯವನ್ನು ಆಳಿದ ಮೂರು ರಾಜರುಗಳು ಮೈಸೂರಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸುವುದಾಗಿದೆ.
ಈ ಹಿಂದೆ ಆಳಿದ ಮೈಸೂರು ರಾಜವಂಶಸ್ಥರಾದ ಮೈಸೂರು ಚಾಮರಾಜ ಒಡೆಯರ್, ಮತ್ತವರ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್. ಯಧು ವಂಶದ ಪ್ರಮುಖರಲ್ಲಿ ಒಬ್ಬರಾಗಿದ್ದರು. ಅವರು ನಂತರ ಬಂದ ಜಯಚಾಮರಾಜ ಒಡೆಯರ್ 25ನೇ ಹಾಗೂ ಕೊನೆಯ ಆಡಳಿತಗಾರರಾಗಿದ್ದರು. ಆವರ ಆಡಳಿತದ ವೈಖರಿ ಹಾಗೂ ಕೊಡುಗೆಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಕ್ರೆಡಿಟ್ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com