ಬಿಬಿಎಂಪಿ ಆಸ್ತಿ ಪತ್ತೆಗೆ ಡಿಜಿಟಲ್ ಸ್ಪರ್ಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. 19 ಲಕ್ಷ ಆಸ್ತಿಗಳಿಗೆ ಏಳು ಅಂಕಿಯ ಗುರುತಿನ ನಂಬರ್ ನೀಡಲಾಗಿದೆ. ಈ ನಂಬರ್ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಯನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. 19 ಲಕ್ಷ ಆಸ್ತಿಗಳಿಗೆ ಏಳು ಅಂಕಿಯ ಗುರುತಿನ ನಂಬರ್ ನೀಡಲಾಗಿದೆ. ಈ ನಂಬರ್ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಯನ್ನು ಸುಲಭವಾಗಿ  ಕಂಡುಹಿಡಿಯಬಹುದಾಗಿದೆ.

ಈ ಆಪ್ ಮೂಲಕ  ಮಾಲೀಕರು ತಮ್ಮ ಆಸ್ತಿಯ ಗುರುತಿನ ನಂಬರ್ ಕಂಡುಹಿಡಿಯಬಹುದಾಗಿದೆ. ಈ ಆಪ್ ಮೂಲಕ ಕಟ್ಟಡ ನಕ್ಷೆ, ಬಳಕೆಯ ಸೇವೆ ಅಥವಾ ತೊಂದರೆಗಳ ಬಗ್ಗೆಗೂ ಸಾರ್ವಜನಿಕರಿಂದ ಮನವಿ ಸ್ವೀಕರಿಸಲು ಬಿಬಿಎಂಪಿ ಚಿಂತಿಸಿದೆ.

ಹೇಗೆ  ಕಾರ್ಯನಿರ್ವಹಿಸುತ್ತದೆ

ಗೂಗಲ್ ಫ್ಲೇ ಸ್ಟೋರ್ ನಿಂದ ಸಾರ್ವಜನಿಕರು ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಬಿಬಿಎಂಪಿ ಸಹಾಯವಾಣಿ ಅಥವಾ ಮೆಸೇಜ್ ಕಳುಹಿಸುವ ಮೂಲಕ  ಗುರುತಿನ ನಂಬರ್ ಪಡೆಯಬಹುದಾಗಿದೆ. ಬಿಬಿಎಂಪಿ ವೆಬ್ ಸೈಟಿನಲ್ಲಿಯೂ ಇದರ ಮಾಹಿತಿ ಲಭ್ಯವಿರಲಿದೆ. ಇ-ಮೇಲ್  ಅಥವಾ ಮೊಬೈಲ್ ನಂಬರ್  ನಿಂದ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಆಪ್ ನಲ್ಲಿ ಒಂದು ಬಾರಿ ಗುರುತಿನ ಸಂಖ್ಯೆ ನೋಂದಣಿಯಾದರೆ, ಸಾಕು ಆ ಪ್ರದೇಶ ಸೇರಿದಂತೆ ಎಲ್ಲವೂ ಗೂಗಲ್  ಅಥವಾ ಉಬರ್ ನಕ್ಷೆಯಲ್ಲಿ ತೋರಿಸುತ್ತದೆ.  ವಿಶೇಷ ಆಯುಕ್ತ ಮನೋಜ್ ರಾಜನ್ ಅವರ ನೇತೃತ್ವದಲ್ಲಿ ಸುಮಾರು 83 ಸಾವಿರ ರೂಪಾಯಿ ವೆಚ್ಚದಲ್ಲಿ ಈ ವಿನೂತನ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
 
 ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯೋಜಿಸಿರುವ ಗುರುತಿನ ಸಂಖ್ಯೆಯ ಬಗ್ಗೆ ವಿವರಿಸಿದ ಮಂಜುನಾಥ್ ಪ್ರಸಾದ್, ಹೊರಗಡೆ ಇರುವ ಮನೆಗಳನ್ನೂ ಆಸ್ತಿ ಮಾಲೀಕರು ಡಿಜಿಟಲ್ ಸಂಖ್ಯೆಯೊಂದಿಗೆ ಸೇರಿಸುವ ಯೋಜನೆಯನ್ನು ಪಾಲಿಕೆ ಮಾಡುತ್ತಿದೆ ಎಂದು ಅವರು ಹೇಳಿದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com