ಹಂಪ್ ಎಗರಿಸಿದ ಕೆಎಸ್ ಆರ್ ಟಿಸಿ ಬಸ್ ಚಾಲಕ: ಬೆನ್ನು ಮೂಳೆ ಮುರಿದುಕೊಂಡು ಕೇಸ್ ದಾಖಲಿಸಿದ ಯುವಕ

: ಕೆಎಸ್ ಆರ್ ಟಿಸಿ ಬಸ್ ಹಂಪ್ ಎಗರಿಸಿದ ಪರಿಣಾಮ ಯುವಕನೊಬ್ಬನ ಬೆನ್ನು ಮೂಳೆಗೆ ಗಂಭೀರ ಗಾಯವಾಗಿರುವ ಘಟನೆ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮಂಡ್ಯ: ಕೆಎಸ್  ಆರ್ ಟಿಸಿ ಬಸ್ ಹಂಪ್ ಎಗರಿಸಿದ ಪರಿಣಾಮ ಯುವಕನೊಬ್ಬನ ಬೆನ್ನು ಮೂಳೆಗೆ ಗಂಭೀರ ಗಾಯವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ, ಮದ್ದೂರು  ತಾಲೂಕು ಸೋಮನಹಳ್ಳಿಯ ಅರವಿಂದ್ ಯುಗಾದಿ ಹಬ್ಬಕ್ಕಾಗಿ ತಮ್ಮ ಊರಿಗೆ ತೆರಳುತ್ತಿದ್ದರು. 
ಈ ಸಂಬಂಧ ಅರವಿಂದ್ ಕೆಎಸ್ ಆರ್ ಟಿಸಿಬಸ್್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಆಜಾಗರೂಕತೆಯ ಚಾಲನೆಯಿಂದಾಗಿ ತಮ್ಮ ಬೆನ್ನು ಮೂಳೆಗೆ ಗಾಯವಾಗಿದೆ ಎಂದು ದೂರಿರುವ ಅರವಿಂದ್, ದೂರು ನೀಡುವ ವೇಳೆ ತಾವು ರಿಸರ್ವೇಷನ್ ಮಾಡಿಸಿದ್ದ ಬಸ್ ನಂಬರ್್ ಹಾಗೂ ಟಿಕೆಟ್ ನ ವಿವರವನ್ನು ನೀಡಿದ್ದಾರೆ. 
ಮಂಗಳೂರು ವಿವಿಯಲ್ಲಿ  ವೈಜ್ಞಾನಿಕ ಸಹಾಯಕನಾಗಿ ಕೆಲಸ ಮಾಡುತ್ತಿರುವ ಅರವಿಂದ್ ಘಟನೆ ಸಂಬಂಂಧ ವಿವರಣೆ ನೀಡಿದ್ದಾರೆ,  ಬಸ್ ನಲ್ಲಿ ನಾನು ನಿದ್ರಿಸುತ್ತಿದ್ದೆ,  ಹಿಂಬದಿಯಿಂದ ಮೂರನೇ ಸಾಲಿನಲ್ಲಿ ನಾನು ಕುಳಿತಿದ್ದೆ, ಈ ವೇಳೆ ಇದ್ದಕ್ಕಿದ್ದಂತೆ ಜೋರಾದ ಶಬ್ದ ಬಂತು, ನಾನು ಅಪಘಾತವಾಗಿಬೇಕು ಎಂದು ಕೊಂಡೆ,  ಆದರೆ ಬಸ್ ಹಂಪ್ ಎಗರಿಸಿದೆ ಎಂದುು ತಿಳಿಯಲು ನನಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ, ನಾನು ಕುಳಿತಿದ್ದ ಸೀಟಿನಿಂದ ಕೆಳಗೆ ಬಿದ್ದೆ, ಈ ಸಂದರ್ಭದಲ್ಲಿ ವಾಪಸ್ ಎದ್ದು ಸೀ್ಟಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ, ಈ ವೇಳೆ ನನಗೆ ಬೆನ್ನು ನೋವಿನ ಅರಿವಾಯಿತು.
ಇದಕ್ಕೂ ಮುನ್ನ ಚಾಲಕ ಮೂರ ರಿಂದ ನಾಲ್ಕು ಬಾರಿ ಹಂಪ್ ಎಗರಸಿದ್ದ. ಹಲವು ಪ್ರಯಾಣಿಕರು ಆತನಿಗೆ ಎಚ್ಚರಿಕೆ ನೀಡಿದ್ದರು. ಬಸ್ ಇಳಿದು ಮನೆಗೆ ತೆರಳಿದ ಅರವಿಂದ್ಗೆ ತುಂಬಾ ಬೆನ್ನು ನೋವು ಕಾಣಿಸಿಕೊಂಡಿದೆ, ನಂತರ ಪಕ್ಕದಲ್ಲಿದ್ದ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ ಮೇಲೆ ಬೆನ್ನು ಉರಿಯ ಮೂಳೆ ಮುರಿದಿದ್ದು ಸರ್ಜರಿ ಅವಶ್ಯಕತೆಯಿದೆ ಎಂದು ಹೇಳಿದರು. ಸರ್ಜರಿಗೆ 1.5 ಲಕ್ಷ ಹಣದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com