ಉಡಾನ್ ಯೋಜನೆಯಡಿ ಕರ್ನಾಟಕದಲ್ಲಿ 12 ಅಧಿಕ ವಾಯುಮಾರ್ಗಗಳ ಸೇರ್ಪಡೆ

ರಾಜ್ಯದ ಎರಡನೇ ದರ್ಜೆಯ ನಗರಗಳಲ್ಲಿ ಸ್ಥಳೀಯ ಪ್ರದೇಶಗಳ ವಾಯುಮಾರ್ಗ ಸಂಪರ್ಕಕ್ಕೆ ಕೇಂದ್ರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಎರಡನೇ ದರ್ಜೆಯ ನಗರಗಳಲ್ಲಿ ಸ್ಥಳೀಯ ಪ್ರದೇಶಗಳ ವಾಯುಮಾರ್ಗ ಸಂಪರ್ಕಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಡಾನ್ ಗೆ ಎರಡನೇ ಸುತ್ತಿನ ಹರಾಜು ಪ್ರಕ್ರಿಯೆ ಕಾರ್ಯ ಯಶಸ್ವಿಯಾಗಿ ಮುಗಿದಿದೆ.
 
ಯೋಜನೆಯಂತೆ ಕೆಲಸ ನಡೆದರೆ ಮೈಸೂರು, ಹುಬ್ಬಳ್ಳಿ, ವಿದ್ಯಾನಗರ, ಕೊಪ್ಪಳದಂತಹ ನಗರಗಳಿಂದ ವಾಯುಸಂಚಾರ ಬಯಸುವ ನಾಗರಿಕರಿಗೆ ಪ್ರಯೋಜನವಾಗಬಹುದು.

ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಾರ, ಸ್ಥಳೀಯ ಸಂಪರ್ಕ ಯೋಜನೆ ಅಡಿಯಲ್ಲಿ ಇದು ಎರಡನೇ ಸುತ್ತಿನ ಬಿಡ್ಡಿಂಗ್ ಆಗಿದ್ದು ಕರ್ನಾಟಕದ ವಿವಿಧ ನಗರಗಳಿಂದ ವಾಯುಯಾನ ಸಂಪರ್ಕವನ್ನು ಏರ್ಪಡಿಸಲಾಗುತ್ತದೆ. ಎರಡನೇ ಸುತ್ತಿನ ಬಿಡ್ಡಿಂಗ್ ನಲ್ಲಿ 15 ವಾಯುಯಾನ ನಿರ್ವಾಹಕರನ್ನು 86 ರಸ್ತೆಗಳಲ್ಲಿ ಮತ್ತು ಸಂಪರ್ಕ ಜಾಲಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

86 ಮಾರ್ಗಗಳಲ್ಲಿ 12 ನಗರಗಳು ಬೆಂಗಳೂರು, ವಿದ್ಯಾನಗರ, ಕೊಪ್ಪಳ ಮತ್ತು ಹುಬ್ಬಳ್ಳಿಗಳನ್ನು ಒಳಗೊಂಡಿವೆ. ಮೊದಲನೇ ಸುತ್ತಿನ ಹರಾಜು ಪ್ರಕ್ರಿಯೆ ನಂತರ 46 ಮಾರ್ಗಗಳು ಕಾರ್ಯನಿರ್ವಹಿಸಲಿದ್ದು ಅವುಗಳಲ್ಲಿ ಮೂರು ಬೆಂಗಳೂರಿನಿಂದ ವಿದ್ಯಾನಗರ, ಮೈಸೂರಿನಿಂದ ಚೆನ್ನೈ ಮತ್ತು ವಿದ್ಯಾನಗರದಿಂದ ಹೈದರಾಬಾದಿಗೆ ಆಗಿರುತ್ತದೆ.

ಈ ಎರಡನೇ ಸುತ್ತಿನ ಹರಾಜು ಪ್ರಕ್ರಿಯೆಗೆ ಅನುಮೋದನೆ ಸಿಕ್ಕಿದ್ದು ಕಾರ್ಯನಿರ್ವಹಣೆ ಆರಂಭಕ್ಕೆ ಕಾಯುತ್ತಿದ್ದಾರೆ. ಕಾರ್ಯನಿರ್ವಹಣೆಯ ಆರಂಭಕ್ಕೆ ಪತ್ರ ನೀಡಿದ ನಂತರ 180 ದಿನಗಳೊಳಗೆ ವಿಮಾನ ಸಂಚಾರ ಕಾರ್ಯಾರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com