ಬೆಂಗಳೂರು: ’ನಮ್ಮ ಬೆಂಗಳೂರು ಫೌಂಡೇಷನ್’ ನೀಡುವ ’ನಮ್ಮ ಬೆಂಗಳೂರು ಪ್ರಶಸ್ತಿ’ ಗೆ ಮೊದಲ ಸ್ಥಾನದಲ್ಲಿ ನನ್ನನ್ನು ಪರಿಗಣಿಸಿರಲಿಲ್ಲ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಹೇಳಿದ್ದಾರೆ.
"ಫೌಂಡೇಷನ್ ಎಂದಿಗೂ ರೂಪಾ ಅವರಿಗೆ ಪ್ರಶಸ್ತಿ ನೀಡಿರಲಿಲ್ಲ, ಹಾಗೆ ನೀಡಿದ್ದಾದರೆ ಆಕೆ ಅದನ್ನು ತಿರಸ್ಕರಿಸುವ ಕಾರಣವೂ ಇಲ್ಲ," ಎಂದು ಎನ್ ಜಿಓ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮ ಬೆಂಗಳೂರು ಫೌಂಡೇಷನ್ ಸಹ ರೂಪಾ ಈ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂದು ಆರೋಪಿಸಿದ್ದು "ರೂಪಾ ಅವರು ಜ್ಯೂರಿಗಳು, ಎನ್ ಬಿಎಫ್ ತಂಡದ ಟ್ರಸ್ಟಿಗಳನ್ನು ಇದಕ್ಕಾಗಿ ಸಂಪರ್ಕಿಸಿದ್ದರು, ಇದರ ಕಾರಣ ಅನೇಕ ಸಂವಹನಗಳು ನಡೆದಿದೆ" ಎಂದು ಹೇಳಿತ್ತು.
ಸುದೀರ್ಘ ಇತಿಹಾಸದಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿಗಾಗಿ ತೀರ್ಪುಗಾರರೊಡನೆ ಲಾಬಿ ಮಾಡಿರುವ ಯಾವ ಉದಾಹರಣೆಗಳೂ ಇಲ್ಲ. ಈ ಬಾರಿ ಸಹ ಇನ್ನೂ ಅಂತಿಮ ವಿಜೇತರನ್ನು ಆಯ್ಕೆ ಮಾಡುವ ಮುನ್ನವೇ ದುರುದ್ದೇಶಪೂರ್ವಕವಾಗಿ ಈ ಅಪಕ್ವ ಹೇಳಿಕೆ ನಿಡುತ್ತಿರುವುದು ಸಾಧುವಲ್ಲ ಎಂಬುದಾಗಿ ಫೌಂಡೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐಪಿಎಸ್ ಅಧಿಕಾರಿ ರೂಪಾ ಈ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ, ಆ ಪ್ರಶಸ್ತಿಯು ದೊಡ್ಡ ಮೊತ್ತದ ನಗದು ಬಹುಮಾನವನ್ನು ಹೊಂದಿದೆ. ತನ್ನ 'ಮನಸ್ಸಾಕ್ಷಿ' ಈ ಪ್ರಶಸ್ತಿ ಸ್ವೀಕರಿಸಲು ನುಮತಿಸುವುದಿಲ್ಲ ಎಂದು ಹೇಳಿದ್ದರೆಂದು ವರದಿಯಾಗಿತ್ತು.
ರೂಪಾ ಅವರನ್ನು ವರ್ಷದ ಅತ್ಯುತ್ತಮ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿಗೆ ನಾಮಕರಣ ಮಾಡಲಾಗಿತ್ತು.
ಉದ್ಯಮಿ ಮತ್ತು ಬಿಜೆಪಿ ರಾಜ್ಯಸಭಾ ಎಂಪಿ ರಾಜೀವ್ ಚಂದ್ರಶೇಖರ್ ಸ್ಥಾಪಿಸಿರುವ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಕಳೆದ ಎಂಟು ವರ್ಷಗಳಿಂದ ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ನೀಡಲಾಗುತ್ತಿದೆ