ಪ್ರಶಸ್ತಿ ನಿರಾಕರಣೆ: ಡಿಐಜಿ ರೂಪಾ ಮತ್ತು ನಮ್ಮ ಬೆಂಗಳೂರು ಪೌಂಡೇಶನ್ ನಡುವೆ ಘರ್ಷಣೆ

ನಮ್ಮ ಬೆಂಗಳೂರು ಫೌಂಡೇಶನ್ ನೀಡುವ 'ನಮ್ಮ ಬೆಂಗಳೂರು ಪ್ರಶಸ್ತಿ' ಸ್ವೀಕರಿಸಲು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ನಿರಾಕರಿಸಿರುವುದು ತೀವ್ರ ...
ಡಿ.ರೂಪಾ
ಡಿ.ರೂಪಾ
Updated on
ಬೆಂಗಳೂರು: ನಮ್ಮ ಬೆಂಗಳೂರು ಫೌಂಡೇಶನ್ ನೀಡುವ 'ನಮ್ಮ ಬೆಂಗಳೂರು ಪ್ರಶಸ್ತಿ' ಸ್ವೀಕರಿಸಲು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ನಿರಾಕರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ, ಪ್ರಶಸ್ತಿ ವಿಷಯ ಅಧಿಕಾರಿ ಮತ್ತು ಫೌಂಡೇಷನ್ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ, 
ಸರ್ಕಾರಿ ಅಧಿಕಾರಿಗಳ ವರ್ಗದಿಂದ ನಾಮ ನಿರ್ದೇಶನಗೊಂಡಿದ್ದ ಒಬ್ಬರ ಅನುಚಿತ ವರ್ತನೆಯಿಂದ ನಮಗೆ ದುಃಖ ಹಾಗೂ ಆಘಾತ ಆಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ. ಪ್ರತಿಷ್ಠಾನದ ತೀರ್ಪುಗಾರರಿಗೆ ಈ ಹಿಂದೆ ಎಂದೂ ಇಂಥ ಲಾಬಿ ಅನುಭವಕ್ಕೆ ಬಂದಿರಲಿಲ್ಲ. ಆ ನಂತರ ಪ್ರಶಸ್ತಿಗೆ ಅಂತಿಮ ವಿಜಯಿಯಾಗಿ ಹೆಸರು ಕೇಳಿಬರದವರಿಂದ ಇಂಥ ಅಪ್ರಬುದ್ಧ ನಡವಳಿಕೆಯೂ ನಮಗೆ ಅನುಭವಕ್ಕೆ ಬಂದಿಲ್ಲ. ಬೆಂಗಳೂರಿನ ಆರು ಸಾಧಕರಿಗೆ ನಮ್ಮ ಬೆಂಗಳೂರು ಪ್ರಶಸ್ತಿ ನಮ್ಮ ಬೆಂಗಳೂರು ಪ್ರತಿಷ್ಠಾನದ ತಂಡ, ಟ್ರಸ್ಟಿ ಹಾಗೂ ತೀರ್ಪುಗಾರರ ಜತೆಗೆ ಈ ನಾಮನಿರ್ದೇಶನಗೊಂಡವರು ಹಲವು ಬಗೆಯ ಸಂವಹನದ ಮೂಲಕ ಲಾಬಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 
ವೇದಿಕೆಯಲ್ಲಿ ಪ್ರಶಸ್ತಿ ನೀಡುವವರೆಗೆ ಪ್ರಶಸ್ತಿ ವಿಜೇತರು ಯಾರು ಅಂತ ಗೊತ್ತಾಗುವುದಿಲ್ಲ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದವರೇ ಹೇಳುತ್ತಾರೆ. ಆದರೆ ಪ್ರಶಸ್ತಿ ಬಂದಿಲ್ಲ ಅನ್ನೋದು ನನಗೆ ಹೇಗೆ ಗೊತ್ತಾಗುತ್ತದೆ? ಹಾಗೆ ಗೊತ್ತಾಗುತ್ತದೆ ಅಂದರೆ ಆ ತೀರ್ಪುಗಾರರ ಬಗ್ಗೆಯೇ ಅನುಮಾನ ಬರುವುದಿಲ್ಲವೆ?" ಎಂದು ರೂಪಾ ಪ್ರಶ್ನಿಸಿದ್ದಾರೆ,.
ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿಗಾಗಿ ಸರಕಾರಿ ಅಧಿಕಾರಿ ಕ್ಯಾಟಗರಿಯಲ್ಲಿ ಒಬ್ಬರು ಬಹಳ ಲಾಬಿ ಮಾಡಿದರು. ಪ್ರಶಸ್ತಿ ಸಿಗುವುದಿಲ್ಲ ಅಂತ ಖಾತ್ರಿಯಾದಾಗ ತಾವು ಪ್ರಶಸ್ತಿ ನಿರಾಕರಿಸಿದ್ದಾಗಿ ಪತ್ರ ಬರೆದಿದ್ದಾರೆ. ಮತ್ತು ಕೆಲ ಆರೋಪ ಮಾಡಿದ್ದಾರೆ. ಆ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ಹಲವು ಅಂಶಗಳನ್ನು ಪ್ರತಿಷ್ಠಾನ ನೀಡಿತ್ತು. ಆ ಪತ್ರಕ್ಕೆ ರೂಪಾ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಪ್ರಶಸ್ತಿ ನಾಮಾಂಕಿತರ ಅನುಚಿತ ವರ್ತನೆ, 'ನಮ್ಮ ಬೆಂಗಳೂರು' ಸ್ಪಷ್ಟನೆ "ಈ ವರೆಗೆ ರಾಜೀವ್ ಚಂದ್ರಶೇಖರ್ ಅವರು ಪಕ್ಷೇತರ ರಾಜ್ಯಸಭಾ ಸದಸ್ಯರಾಗಿದ್ದರು. ಈಚೆಗೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಕಳೆದ ಎರಡು ವರ್ಷದಿಂದ ರಾಜ್ಯ ಸರಕಾರದ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನ ಕೆಲವು ಹೋರಾಟ ನಡೆಸಿಕೊಂಡು ಬಂದಿದೆ. ಸ್ಟೀಲ್ ಸೇತುವೆ ಬೇಡ ಇರಬಹುದು ಅಥವಾ ಕಾವೇರಿ ನೀರಿನ ಜತೆ ಚರಂಡಿ ನೀರು ಸೇರುತ್ತಿದೆ ಎಂಬುದು ಇರಬಹುದು. ಅದರ ಸರಿ-ತಪ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದು ರೂಪಾ ಡಿ ಮೌದ್ಗಿಲ್ ಹೇಳಿದ್ದಾರೆ
ಬೆಂಗಳೂರಿನ ಆರು ಸಾಧಕರಿಗೆ ನಮ್ಮ ಬೆಂಗಳೂರು ಪ್ರಶಸ್ತಿ "ನಾವು ಅಂದರೆ ಅಧಿಕಾರಿಗಳೇ ಎಷ್ಟೋ ಪ್ರಕರಣದಲ್ಲಿ ಸರಕಾರವನ್ನು ಪ್ರತಿನಿಧಿಸುತ್ತೇವೆ. ಕಳೆದ ಎರಡು ವರ್ಷದಿಂದ ನಮ್ಮ ಬೆಂಗಳೂರು ಪ್ರತಿಷ್ಠಾನವು ಸರಕಾರಿ ಅಧಿಕಾರಿ ಕ್ಯಾಟಗರಿಯಲ್ಲಿ ಯಾರಿಗೆ ಪ್ರಶಸ್ತಿ ನೀಡಿದ್ದಾರೆ ಗಮನಿಸಿ. ಇದು ತಿಳಿದುಕೊಳ್ಳುವುದಕ್ಕೆ ರಾಕೆಟ್ ಸೈನ್ಸ್ ಬೇಡ. ಸರಕಾರದ ಪರ ಕೋರ್ಟ್ ಗೆ ತೆರಳುವ ಅಧಿಕಾರಿಗಳಿಗೇ ಪ್ರಶಸ್ತಿ ನೀಡುವ ಔಚಿತ್ಯ ಏನು? ಈ ಬಗ್ಗೆ ತನಿಖೆ ಆಗಬೇಕು" ಎಂದು ರೂಪಾ ಮೌದ್ಗಿಲ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com