ಸಿದ್ದರಾಮಯ್ಯ ಆ್ಯಪ್
ರಾಜ್ಯ
ಕಾಂಗ್ರೆಸ್ ಆ್ಯಪ್ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ ಆ್ಯಪ್ ಸಹ ಪ್ಲೇ ಸ್ಟೋರ್‌ನಿಂದ ಡಿಲೀಟ್!
ಕಾಂಗ್ರೆಸ್ ಆ್ಯಪ್ ಬಳಿಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆ್ಯಪ್ ಸಹ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಲಾಗಿದೆ...
ಬೆಂಗಳೂರು: ಕಾಂಗ್ರೆಸ್ ಆ್ಯಪ್ ಬಳಿಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆ್ಯಪ್ ಸಹ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಲಾಗಿದೆ.
ಸಿದ್ದರಾಮಯ್ಯ ಆ್ಯಪ್ ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ಮೈಸೂರಿನ ಖಾಸಗಿ ಕಂಪನಿಗೆ ರವಾನೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆ್ಯಪ್ ಸಹ ಡಿಲೀಟ್ ಮಾಡಲಾಗಿದೆ.
ಮೈಸೂರಿನ ಟೆಕ್ಕಿ ಶ್ರೀಹರ್ಷ ಪೆರ್ಲ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನ ಆ್ಯಪ್ ನನ್ನ ಖಾಸಗಿ ವಿವರಗಳಾದ ಹೆಸರು, ಮೊಬೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಮೈಸೂರಿನ ಇನ್ ಫೋಫೈನ್ ಎಂಬ ಕಂಪನಿಗೆ ರವಾನೆ ಮಾಡಿದೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಿಂದ ಸಿದ್ದರಾಮಯ್ಯನವರ ಆ್ಯಪ್ ಅನ್ನು ಡಿಲೀಟ್ ಮಾಡಲಾಗಿದೆ. ಸರ್ಕಾರಿ ಆ್ಯಪ್ ನಲ್ಲಿದ್ದ ಮಾಹಿತಿಯನ್ನು ಖಾಸಗಿ ಕಂಪನಿಗೆ ವರ್ಗಾಯಿಸಿದ್ದು ಏಕೆ ಮತ್ತು ಖಾಸಗಿ ಮಾಹಿತಿ ಸುರಕ್ಷತೆ ಬಗ್ಗೆ ಮುಖ್ಯಮಂತ್ರಿ ಖಾತರಿ ನೀಡುವರೇ ಎಂದು ಶ್ರೀಹರ್ಷ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಆ್ಯಪ್ ಈವರೆಗೆ ಸುಮಾರು 30 ಸಾವಿರ ಬಳಕೆದಾರರು ಡೌನ್ ಲೋಡ್ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ