ಸುಳ್ಳುಸುದ್ದಿ ಪ್ರಕಟ: ಪೋಸ್ಟ್‌ಕಾರ್ಡ್‌ ಡಾಟ್‌ ನ್ಯೂಸ್‌’ ಮಾಲಿಕ ಸೆರೆ

ಕೋಮು ಸಂಘರ್ಷ ಹುಟ್ಟು ಹಾಕುವಂತ ಸುಳ್ಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪೋಸ್ಟ್‌ಕಾರ್ಡ್‌ ಡಾಟ್‌ ನ್ಯೂಸ್‌’ ಮಾಲೀಕ ಮಹೇಶ್ ವಿಕ್ರಮ್ ಹೆಗಡೆ ಅವರನ್ನು ...
ಮಹೇಶ್ ವಿಕ್ರಮ್ ಹೆಗಡೆ ಪ್ರಕಟಿಸಿದ್ದ ಸುದ್ದಿ
ಮಹೇಶ್ ವಿಕ್ರಮ್ ಹೆಗಡೆ ಪ್ರಕಟಿಸಿದ್ದ ಸುದ್ದಿ
ಬೆಂಗಳೂರು: ಕೋಮು ಸಂಘರ್ಷ ಹುಟ್ಟು ಹಾಕುವಂತ ಸುಳ್ಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪೋಸ್ಟ್‌ಕಾರ್ಡ್‌ ಡಾಟ್‌ ನ್ಯೂಸ್‌’ ಮಾಲೀಕ ಮಹೇಶ್ ವಿಕ್ರಮ್ ಹೆಗಡೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಹೆಗ್ಡೆ ವಿರುದ್ಧ 2 ದೂರುಗಳು ದಾಖಲಾಗಿವೆ, ಒಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿ  ಮತ್ತೊಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ, 
ಮಾರ್ಚ್ 18 ರಂದು ಜೈನ ಮುನಿ ಉಪಾಧ್ಯಾಯ ಮಾಯಾಂಕ್ ಸಾಗರ್‌ ಜೀ ಅವರ ಮೇಲೆ ಮುಸ್ಲಿಮ್ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ’ಸಿದ್ದರಾಮಯ್ಯ ಅವರ ಕರ್ನಾಟಕದಲ್ಲಿ ಯಾರೋಬ್ಬರಿಗೂ ರಕ್ಷಣೆ ಇಲ್ಲ ಎನ್ನುವಂತ ಸುದ್ದಿ ಹಾಕಿ ಫೋಟೋ ಜೊತೆ ಪ್ರಕಟಿಸಿದ್ದರು,
ಈ ಸುಳ್ಳು ಸುದ್ದಿ ಸಂಬಂಧ ಗಫರ್ ಬೇಗ್‌ ಎಂಬುವವರು ದೂರು ನೀಡಿದ್ದರು. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆಗಳ ಆಧಾರದಲ್ಲಿ ಗುಂಪುಗಳ ಮಧ್ಯೆ ದ್ವೇಷ ಬಿತ್ತುವುದು ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂಥ ಕೃತ್ಯಗಳನ್ನೆಸಗುವುದು), 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ) ಮತ್ತು 120ಬಿ (ಅಪರಾಧ ಸಂಚು) ಅನ್ವಯ ಪ್ರಕರಣ ದಾಖಲಾಗಿದೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗೌರವ್ ಪ್ರಧಾನ್ ಹಾಗೂ ದೀಪಕ್ ಶೆಟ್ಟಿ ಎಂಬುವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com