ಪ್ರಚೋದನಾಕಾರಿ ಭಾಷಣ: ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ದಾಖಲು

ಕೊಪ್ಪಳದ ಹಿರೇಸುಳಿಕೇರಿ ತಾಂಡಾದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಕೊಪ್ಪಳ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.
ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ
Updated on
ಕೊಪ್ಪಳ: ಕೊಪ್ಪಳದ ಹಿರೇಸುಳಿಕೇರಿ ತಾಂಡಾದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಕೊಪ್ಪಳ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ಹಿರೇಸುಳಿಕೇರಿ ತಾಂಡಾದಲ್ಲಿ  ಸೋಮವಾರ ಕೋಮು ಬಾವನೆ ಕೆರಳಿಸುವಂತೆ ಬಾಷಣ ಮಾಡಿದ್ದ ಚೈತ್ರಾ ಮಸೀದಿಗಳಲ್ಲಿ ಮತಾಂತರಕ್ಕಾಗಿ ರೇಟ್ ಫಿಕ್ಸ್ ಮಾಡಲಾಗುತ್ತಿದೆ ಎಂದಿದ್ದರು.
ಬ್ರಾಹ್ಮಣ, ಕ್ಷತ್ರಿಯ, ಕುರುಬ ಹೀಗೆ ಜಾತಿಗಳ ಆಧಾರದಲ್ಲಿ ಮತಾಂತರ ಮಾಡಿಸಿದವರಿಗೆ ಹಣ ಸಂದಾಯವಾಗಲಿದೆ ಎಂದಿದ್ದ ಚೈತ್ರಾ ತಮ್ಮ ಭಾಷಣವನ್ನು ರೆಕಾರ್ಡ್ ಮಾಡದಂತೆ ಮನವಿ ಮಾಡಿದ್ದರು.
ಚೈತ್ರಾ ಅವರ ಕುರಿತಂತೆ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ್ದ ಪರಮೇಶ್ ಬಡಗಿಯ ಊರಾದ ಹಿರೇಸುಳಿಕೇರಿ ತಾಂಡಾದಲ್ಲಿ ಅವರು ಮಾತನಾಡಿದ್ದರು.
ಪರಮೇಶ ಬಡಗಿಯು ಇಕ್ಬಾಲ್ ಅನ್ಸಾರಿಯವರ ಆಪ್ತ ಎನ್ನಲಾಗಿದ್ದು ಈತ ಕಳೆದ ಕೆಲ ದಿನಗಳ ಹಿಂದೆ ಚೈತ್ರಾ ಭವಚಿತ್ರಗಳನ್ನು ಎಡಿಟ್ ಮಾಡಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದ್ರೆ ಎಂದು ಶೇರ್ ಮಾಡಿದ್ದರು. ಇದಕ್ಕೆ ಉತ್ತರಿಸಲೆನ್ನುವಂತೆ ಚೈತ್ರಾ ಆತನ ಗ್ರಾಮಕ್ಕೆ ಆಗಮಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com