
ಬೆಂಗಳೂರು : ವಾರಾಂತ್ಯದಲ್ಲಿ ಮತ ಚಲಾಯಿಸಲು ಕೆಲ ನಗರ ಪ್ರದೇಶದ ಮತದಾರರು ಆಸಕ್ತಿ ತೋರುವುದಿಲ್ಲ ಎಂಬ ಭೀತಿ ಕೆಲ ಅಭ್ಯರ್ಥಿಗಳಲ್ಲಿ ಮನೆ ಮಾಡಿರುವ ಮಧ್ಯೆ, ಮತ ಚಲಾಯಿಸಲೆಂದು ದೂರದ ಮಲೇಷ್ಯಾದಿಂದ 39 ವರ್ಷದ ಟೆಕ್ಕಿ ಮನೋಹರ್ ಐಯ್ಯರ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಮನೋಹರ್ ಐಯ್ಯರ್ ಧೀರ್ಘಕಾಲ ಬೆಂಗಳೂರಿನ ನಿವಾಸಿಯಾಗಿದ್ದರು. ಮತ ಚಲಾವಣೆ ತಮ್ಮ ಹಕ್ಕು ಕರ್ತವ್ಯ ಎಂದು ಅವರು ಭಾವಿಸಿದ್ದು, ಪ್ರಜಾಪ್ರಭುತ್ವಕ್ಕೆ ಗೌರವ ನಿಟ್ಟಿನಲ್ಲಿ ಮತ ಚಲಾಯಿಸಲು ಬಂದಿರುವುದಾಗಿ ತಿಳಿಸಿದ್ದಾರೆ.
ಐಟಿ ವೃತ್ತಿದಾರರು ತಂಡವೊಂದು ಇತ್ತೀಚಿಗೆ ಯುಟ್ಯೂಬ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ಮತ ಚಲಾಯಿಸುವಂತೆ ಪೋಸ್ಟ್ ಹಾಕಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮನೋಹರ್ ಐಯ್ಯರ್ ಕುಡಿಯುವ ನೀರು, ಕಸ ಸಂಗ್ರಹ, ರಸ್ತೆ ಕಾಮಗಾರಿಯನ್ನು ಚುನಾಯಿತ ಪ್ರತಿನಿಧಿಗಳು ವ್ಯವಹರಿಸಬೇಕಾಗಿದೆ. ಅವುಗಳನ್ನು ಯಾರೂ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುತ್ತಾರೋ ಅಂತಹವರಿಗೆ ಜಾತಿ, ಪಕ್ಷ ಎನ್ನದೇ ಮತ ನೀಡಬೇಕೆಂದು ಕತ್ರಿಗುಪ್ಪೆ ನಿವಾಸಿಯಾಗಿರುವ ಮನೋಹರ್ ಐಯ್ಯರ್ ಹೇಳಿದ್ದಾರೆ.
ಮೇ 11 ರಂದು ಕೌಲಾಲಂಪುರದಿಂದ ಹೊರಡಲಿದ್ದು, ಮೇ 12 ರಂದು ಕೊಚ್ಚಿ ಮೂಲಕ ಬೆಂಗಳೂರು ತಲುಪಲಿದ್ದೇನೆ . ಅಂದು ಸಂಜೆ ಬೆಂಗಳೂರಿನಿಂದ ಹೊರಡಲಿದ್ದು, ಮೇ 13 ರಂದು ಕೌಲಾಲಂಪುರ ತಲುಪುವುದಾಗಿ ಅವರು ತಿಳಿಸಿದ್ದಾರೆ. 10ಕ್ಕಿಂತಲೂ ಹೆಚ್ಚು ಬಾರಿ ಮತ ಚಲಾಯಿಸಿದ್ದು, ಎಲ್ಲಿದ್ದರೂ ಮತ ಚಲಾಯಿಸಲು ಬೆಂಗಳೂರಿಗೆ ಬರುವುದಾಗಿ ಅವರು ಹೇಳಿದ್ದಾರೆ.
ಉತ್ತಮ ಆಡಳಿತಕ್ಕಾಗಿ ಅದೊಂದು ಅವಕಾಶವಾಗಿದೆ. ಸ್ವಚ್ಛ ಕೆರೆ, ಶಾಲಾ ಕಾಲೇಜ್ ಅಭಿವೃದ್ದಿ, ವಿದ್ಯುತ್, ನೀರು ಪೂರೈಕೆ ಮತ್ತಿತರ ಅಗತ್ಯ ಮೂಲಸೌಕರ್ಯ ಒದಗಿಸುವವರಿಗೆ ಜಾತಿ, ಮತ ಎಂಬ ಬೇಧ ಮಾಡದೇ ಮತ ಚಲಾಯಿಸುವಂತೆ ನಾಗರಿಕರನ್ನು ಅವರು ಒತ್ತಾಯಿಸಿದ್ದಾರೆ. ಇವರ ಈ ವಿಡಿಯೋವನ್ನು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement