ಪಿಯುಸಿಯಲ್ಲಿ ಕಡಿಮೆ ಅಂಕ ಸಿಕ್ಕಿದಿಯೇ? ಆತಂಕ ಬೇಡ, ಹತ್ತಾರು ಅವಕಾಶಗಳಿವೆ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕಡಿಮೆ ಅಂಕ ಗಳಿಸಿದ ಅನೇಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕಡಿಮೆ ಅಂಕ ಗಳಿಸಿದ ಅನೇಕ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟು ಸಿಗುವುದಿಲ್ಲ, ವೃತ್ತಿಪರ ಕೋರ್ಸ್ ಗಳು ಮಾಡಲು ಸಾಧ್ಯವಾಗುವುದಿಲ್ಲ ಮುಂದೆ ಭವಿಷ್ಯವೇನು ಎಂಬ ಆತಂಕ ವಿದ್ಯಾರ್ಥಿಗಳದ್ದು. ಆದರೆ ಕಡಿಮೆ ಅಂಕ ಬಂತೆಂದು ವಿದ್ಯಾರ್ಥಿಗಳು ಗಾಬರಿಯಾಗಬೇಕಾಗಿಲ್ಲ.

ಕೆಲವು ಅಂಕ ಕಡಿಮೆ ಬಂದ ಪೋಷಕರು ಮಕ್ಕಳನ್ನು ಒತ್ತಾಯಪೂರ್ವಕವಾಗಿ ಮತ್ತೆ ಪರೀಕ್ಷೆ ಬರೆಯುವಂತೆ ಪೀಡಿಸುತ್ತಿದ್ದಾರೆ. ಫಲಿತಾಂಶವನ್ನು ತಿರಸ್ಕರಿಸುವಂತೆ ಕೆಲವು ಪೋಷಕರು ಕರೆ ಮಾಡುತ್ತಿರುತ್ತಾರೆ. ಆದರೆ ಅದು ಸರಿಯಾದ ತೀರ್ಮಾನವಲ್ಲ. ಪಿಯುಸಿ ನಂತರ ತಮ್ಮ ಮಕ್ಕಳು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಮಾತ್ರವೇ ಮಾಡಬೇಕೆಂದು ಏಕೆ ಯೋಚಿಸುತ್ತಾರೆ ಎಂದು ಗೊತ್ತಾಗುವುದಿಲ್ಲ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಇಳಾಲ್.

ಈ ಹಿನ್ನೆಲೆಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕೆಲವು ಶಿಕ್ಷಣ ತಜ್ಞರು ಮತ್ತು ಅಧ್ಯಯನಶೀಲರನ್ನು ಭೇಟಿ ಮಾಡಿ ಪಿಯುಸಿ ನಂತರ ಯಾವ್ಯಾವ ಆಯ್ಕೆಗಳು ವಿದ್ಯಾರ್ಥಿಗಳ ಮುಂದಿವೆ ಎಂದು ಮಾತನಾಡಿಸಿತು.

ಖಾಸಗಿ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಶ್ರೀಕಾಂತ್ ತಮ್ಮ ಅಭಿಪ್ರಾಯ ತಿಳಿಸಿ, ಪೋಷಕರು ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂದು ನೋಡಿಕೊಂಡು ಅದಕ್ಕೆ ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್ ಗಳಿಗೆ ಒತ್ತಾಯಪೂರ್ವಕವಾಗಿ ಸೇರಿಸಿದರೆ ಮಕ್ಕಳಿಗೆ ಅದರಿಂದ ತೃಪ್ತಿ ಸಿಗುವುದಿಲ್ಲ. ಇಂದು ಜನರಿಗೆ ಗೊತ್ತಿಲ್ಲದಿರುವ ಹಲವು ಕೋರ್ಸ್ ಗಳಿವೆ ಅವುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಪೋಷಕರ ಜೊತೆ ಇಂತಹ ಕೋರ್ಸ್ ಗಳ ಪ್ರಚಾರಕ್ಕೆ ಸರ್ಕಾರ ಕೂಡ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇನ್ನು ಕೆಲವು ಉದ್ಯೋಗ ಸುಲಭವಾಗಿ ಸಿಗುವ ಕೆಲಸಗಳಿರುತ್ತವೆ. ಇಂದು ಉದ್ಯೋಗ ಮಾರುಕಟ್ಟೆಯನ್ನು ಗಮನಿಸಿದರೆ ಎಂಜಿನಿಯರಿಂಗ್/ಐಟಿ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಕೋರ್ಸ್ ಗಳಿಗೆ ಬೇಡಿಕೆಯಿದೆ. ಇನ್ನು ಕೆಲವು ಕೋರ್ಸ್ ಗಳು ಕಲಿಯಲು ಸುಲಭವಾಗಿದ್ದು ಕೋರ್ಸ್ ಮುಗಿದ ತಕ್ಷಣವೇ ಉದ್ಯೋಗ ಸಿಗುತ್ತದೆ. ಇಂತಹ ಕೋರ್ಸ್ ಗಳನ್ನು ಹುಡುಕುವುದು ಒಳ್ಳೆಯದು ಎನ್ನುತ್ತಾರೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಹಿರಿಯ ಅಧಿಕಾರಿ ಡಾ.ವೆಂಕಟೇಶ್.

ಫಿಸಿಯೋಥೆರಪಿಯಲ್ಲಿ ಬಿ.ಎಸ್ಸಿ, ಕ್ಯಾತ್ ಲಾಬ್ ಟೆಕ್ನಾಲಜಿ, ಕೆಲವು ಮ್ಯಾನೇಜ್ ಮೆಂಟ್ ಕೋರ್ಸ್ ಗಳು ಬಹು ಬೇಡಿಕೆಯಲ್ಲಿವೆ ಎನ್ನುತ್ತಾರೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರ್. ಇನ್ನು ಕೆಲವು ಕಡೆಗಳಲ್ಲಿ ಪಿಯುಸಿ ನಂತರ ಏನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕೌನ್ಸೆಲಿಂಗ್ ನೀಡುವ ಕೇಂದ್ರಗಳು ಸಹ ಇರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com