ರೈಲಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ವಿಮಾನದಲ್ಲಿ ಹೋಗಿ ಬಂಧಿಸಿದ ಕರ್ನಾಟಕ ಪೊಲೀಸ್!

ಕರ್ನಾಟಕ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಮೂವರು ಭದ್ರತಾ ಸಿಬ್ಬಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ...
ಕರ್ನಾಟಕ ಪೊಲೀಸ್
ಕರ್ನಾಟಕ ಪೊಲೀಸ್
ಚಿಕ್ಕಬಳ್ಳಾಪುರ: ಕರ್ನಾಟಕ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಮೂವರು ಭದ್ರತಾ ಸಿಬ್ಬಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಗೌರಿಬಿದನೂರು ತಾಲೂಕಿನ ಗೊಡ್ಡಾವರಹಳ್ಳಿ ಬಳಿ ಬೆಂಗಳೂರು ಮೂಲದ 81 ವರ್ಷದ ಕರೀಂಖಾನ್ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗೆ ಅಂತ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು. 
ಮೇ 3ರಂದು ತೋಟಕ್ಕೆ ಕರೀಂಖಾನ್ ಬಂದಿದ್ದಾರೆ. ಈ ವೇಳೆ ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಅವರ ಕೈ ಕಾಲು ಕಟ್ಟಿ ತೋಟದಲ್ಲಿನ ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ನಂತರ ಕರೀಂಖಾನ್ ಮಗ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಮ್ಮ ತಂದೆಯನ್ನು ಕಿಡ್ನಾಪ್ ಮಾಡಿದ್ದು 70 ಲಕ್ಷ ರುಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. 
ಕೂಡಲೇ ಆಯೂಬ್ ಖಾನ್ ಗೌರಿಬಿದನೂರು ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಸೆಕ್ಯೂರಿಟಿ ಗಾರ್ಡ್ ಗಳೇ ಅಪಹರಣಕಾರರು ಎಂದು ತಿಳಿದಿದ್ದು ರೈಲಿನಲ್ಲಿ ಅಸ್ಸಾಂಗೆ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಪೊಲೀಸರು ವಿಮಾನದಲ್ಲಿ ಕೊಲ್ಕತ್ತಾಗೆ ತೆರಳಿ ಹೌರಾ ರೈಲ್ವೆ ಜಂಕ್ಷನ್ ಬಳಿ ಬಂಧಿಸಿದ್ದಾರೆ. 
ವಿಚಾರಣೆ ವೇಳೆ ಆರೋಪಿಗಳು ಕರೀಖಾನ್ ರನ್ನು ಕೂಡಿ ಹಾಕಿದ್ದು ಅವರು ಅಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಈ ವಿಷಯ ಪೊಲೀಸರಿಗೆ ತಿಳಿಯುವ ಮೊದಲೇ ಅಸ್ಸಾಂಗೆ ಪರಾರಿಯಾಗಬೇಕು ಎಂದು ಹೋಗುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾರೆ. 
ಬಂಧಿತ ಆರೋಪಿಗಳನ್ನು ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com