ಬೆನ್ನು, ಸೊಂಟದ ಮೂಳೆ ಮುರಿದಿದ್ದರೂ ಎಸ್ ಎಸ್ ಎಲ್ ಸಿಯಲ್ಲಿ ಶೇ.89 ಅಂಕ ಪಡೆದು ಸಾಧನೆ!

ಆಟೋ ರಿಕ್ಷಾ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದು ಬೆನ್ನು ಹಾಗೂ ಸೊಂಟದ ಮೂಳೆ ಮುರಿದಿದ್ದರೂ ಬಾಲಕನೊಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ,89 ರಷ್ಚು ಅಂಕದೊಂದಿಗೆ ...
ಬೆನ್ನು ಮೂಳೆ ಮುರಿದಿದ್ದರೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ
ಬೆನ್ನು ಮೂಳೆ ಮುರಿದಿದ್ದರೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ
ಬೆಂಗಳೂರು: ಆಟೋ ರಿಕ್ಷಾ ಡಿಕ್ಕಿ ಹೊಡೆದು ನೆಲಕ್ಕೆ  ಬಿದ್ದು ಬೆನ್ನು ಹಾಗೂ ಸೊಂಟದ ಮೂಳೆ ಮುರಿದಿದ್ದರೂ ಬಾಲಕನೊಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.89 ರಷ್ಚು ಅಂಕದೊಂದಿಗೆ ತೇರ್ಗಡೆಯಾಗಿದ್ದಾನೆ.
ಮಲ್ಲೇಶ್ವರಂ ನಲ್ಲಿರುವ ಎಂಇಎಸ್ ಕಿಶೋರ ಕೇಂದ್ರದ ವಿದ್ಯಾರ್ಥಿ ರುಮನ್ ಶರೀಫ್ ಈ ಸಾಧನೆ ಮಾಡಿದ್ದಾರೆ. 
ಗಾಯಗೊಂಡಿರುವ ರುಮನ್ ಇನ್ನೂ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾನೆ, ಇಷ್ಟು ಅಂಕ ಬರುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ, ನನಗೆ ತುಂಬಾ ಸಂತೋಷವಾಗುತ್ತಿದೆ, ನನ್ನ ಪೋಷಕರಿಗೆ, ಶಿಕ್ಷಕರಿಗೆ ಹಾಗೂ ನನಗೆ ಸಹಾಯ ಮಾಡಿದ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ  ಹೇಳಿದ್ದಾನೆ.
ಇದು ನನ್ನ ಮೊದಲ ಬೋರ್ಡ್ ಎಕ್ಸಾಂ. ಇದರಲ್ಲಿ ನಾನು ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ನನಗಿತ್ತು. ಆದರೆ ದುರಾದೃಷ್ಟ ನನಗೆ ಅಪಘಾತವಾಯಿತು, ನಾನು ಪರೀಕ್ಷೆ ಬರೆಯಲು ಮತ್ತೆ ಒಂದು ವರ್ಷ ಕಾಯಬೇಕು ಎಂದು ಯೋಚಿಸಿದ್ದೆ, ಆದರೆ ಹೇಗೋ ನಾನು ನೋವು ಸಹಿಸಿಕೊಂಡು ಉತ್ತಮ ಅಂಕ ಪಡಯುವಲ್ಲಿ ಸಾಧ್ಯವಾಯಿತು ಎಂದು ಹೇಳಿದ್ದಾನೆ
ನನ್ನ ಮಗ ವೈದ್ಯನಾಗುವುದು ಬೇಡ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ, ಆದರೆ ಈಗ ಆತ ಸರ್ಜರಿಗೆ ಒಳಪಟ್ಟ ಮೇಲೆ ಆತ ಡಾಕ್ಟರ್ ಆಗಬೇಕೆಂದು ನಾನು ಬಯಸುತ್ತಿದ್ದೇನೆ ಎಂದು ಆತನ ತಾಯಿ ಹೇಳಿದ್ದಾರೆ,
ರುಮನ್ ಬರವಣಿಗೆ ತುಂಬಾ ಚೆನ್ನಾಗಿದೆ, ಆದರೆ ಪರೀಕ್ಷೆಯಲ್ಲಿ ಆತ ಸ್ವಂತವಾಗಿ ಬರೆಯಲು ಸಾಧ್ಯವಾಗಲಿಲ್ಲ, ಇದಕ್ಕೆ ಬೇರೋಬ್ಬರ ಸಹಾಯ ಪಡೆಯಬೇಕಾಯಿತು. 
ಫೆಬ್ರವಿರ 27 ರಂದು ಪ್ರಿಪರೇಟರಿ ಪರೀಕ್ಷೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ವೇಳೆ, ರುಮನ್ ಷರೀಪ್ ಗೆ ಅಪಘಾತವಾಗಿತ್ತು.  ರಸ್ತೆ ದಾಟುವ ಸಂದರ್ಭದಲ್ಲಿ ಆಟೋರಿಕ್ಷ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಆತನನ್ನು ಕೆ,ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆತನ ಸೊಂಟದ ಮೂಳೆ ಮುರಿದಿದ್ದು  ಸ್ಪೈನಲ್ ಕಾರ್ಡ್ ಗಬ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದರು,. ಹಾಗಾಗಿ ಆತನಿಗೆ ನಡೆಯಲು ಸಾಧ್ಯವಾಗಲಿಲ್ಲ, 
ಇದಾದ ನಂತರ ಆತನ ಪೋಷಕರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿದ ಅಧಿಕಾರಿಗಳು ಮಾನವೀಯತೆ ಅಧಾರದ ಮೇಲೆ ಆತನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿತು, ಜೊತೆಗ ಅತನಿಗೆ ಪರೀಕ್ಷೆ ಬರೆಯಲು ಪ್ರತ್ಯೇತ ಕೊಠಡಿ ನೀಡಲಾಗಿತ್ತು, ನೆಲದ ಮೇಲೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಇಲಾಖೆ ಆತನಿಗಾಗಿ ಹೆಚ್ಚವರಿ 15 ನಿಮಿಷ ಸಮಯ ಕೊಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com