ಕಷ್ಟವನ್ನು ಕೊಡವಿ ಫೀನಿಕ್ಸ್ ನಂತೆ ಮೇಲೆದ್ದು ಬಂದ ಮಕ್ಕಳಿವರು...

ಖಾಸಗಿ ಸಮಸ್ಯೆಗಳನ್ನು ಮೀರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಬಾಲಕಿ ...
ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತುಳಸಿ ತನ್ನ ತಾಯಿ ಜೊತೆ ಸಂಭ್ರಮಿಸುತ್ತಿರುವುದು
ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತುಳಸಿ ತನ್ನ ತಾಯಿ ಜೊತೆ ಸಂಭ್ರಮಿಸುತ್ತಿರುವುದು

ಮಂಗಳೂರು: ವೈಯಕ್ತಿಕ ಸಮಸ್ಯೆಗಳನ್ನು ಮೀರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಬಾಲಕಿ ಸಾಧನೆಯ ಕಥೆಯಿದು. ಲೈಂಗಿಕ ದೌರ್ಜನ್ಯಕ್ಕೆ ಬಾಲ್ಯದಲ್ಲಿಯೇ ಸಿಲುಕಿದ್ದ ಬಾಲಕಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 60 ಅಂಕ ಗಳಿಸಿದ್ದಾಳೆ.

ಈ ಅಪ್ರಾಪ್ತಗೆ ಶಿಕ್ಷಣ ಮುಂದುವರಿಸಿ ತನ್ನ ಕನಸನ್ನು ಬೆನ್ನಟ್ಟಲು ಕಾರಣವಾಗಿದ್ದು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಮತ್ತು ಪೊಕ್ಸೊ ಕಾಯ್ದೆಯಡಿ ಇರುವ ಪೊಲೀಸ್ ಮತ್ತು ಬಾಲ್ಯಾಭಿವೃದ್ಧಿ ಸಮಿತಿ.

ಬಾಲ್ಯದಲ್ಲಿ ತನ್ನ ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಳು. ಆರಂಭದಲ್ಲಿ ಈಕೆಗೆ ಹಾಲ್ ಟಿಕೆಟ್ ಸಿಕ್ಕಿರಲಿಲ್ಲ. ಮಂಗಳೂರಿನಲ್ಲಿ ಡಿಡಿಪಿಐ ಕೇಂದ್ರದಿಂದ ಹೊಸ ಹಾಲ್ ಟಿಕೆಟ್ ನೀಡಲಾಯಿತು. ಪೊಕ್ಸೊ ಕಾಯ್ದೆಯಡಿ ಕಾಪಾಡಲಾದ ಮಕ್ಕಳಿಗೆ ಶಿಕ್ಷಣ ಇಲಾಖೆ ನಿಯಮದಲ್ಲಿ ವಿನಾಯಿತಿ ನೀಡುತ್ತದೆ ಎಂದು ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ರೆನ್ನಿ ಡಿ ಸೌಜ ಹೇಳುತ್ತಾರೆ.

ಮತ್ತೊಬ್ಬ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿ ಮೊನ್ನೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 88 ಅಂಕ ಗಳಿಸಿದ್ದಾಳೆ. ಬಾಲಕಿಯ ತಂದೆ ಬಂದು ಪರೀಕ್ಷೆ ಬರೆಯಲು ಎಲ್ಲ ರೀತಿಯಲ್ಲಿ ಅನುಕೂಲ ಮಾಡಿಕೊಟ್ಟದ್ದಕ್ಕೆ ಧನ್ಯವಾದ ಹೇಳಿದರು ಎನ್ನುತ್ತಾರೆ ಡಿಡಿಪಿಐ ವೈ.ಶಿವರಾಮಯ್ಯ.

ದಕ್ಷಿಣ ಕನ್ನಡದಲ್ಲಿ ಈ ವರ್ಷ ಎಸ್ಎಸ್ಎಲ್ ಸಿಯಲ್ಲಿ ಒಟ್ಟಾರೆ ಫಲಿತಾಂಶದಲ್ಲಿ ಶೇಕಡಾ 2.17 ರಷ್ಟು ಹೆಚ್ಚಾದರೂ ಕೂಡ ರಾಜ್ಯದಲ್ಲಿ ರ್ಯಾಂಕ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com