ಸ್ವಚ್ಚ ಭಾರತ ಇಂಟರ್ ಶಿಪ್: ಮುಂಚೂಣಿಯಲ್ಲಿ ಕರ್ನಾಟಕ

ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಬೇಸಿಗೆಯಲ್ಲಿ ಸ್ವಚ್ಚ ಭಾರತ ಅಭಿಯಾನದಡಿ ಇಂಟರ್ನ್ಶಿಪ್ ಕಾರ್ಯಕ್ರಮಕ್ಕಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು
ಸ್ವಚ್ಚ ಭಾರತ ಇಂಟರ್ ಶಿಪ್: ಮುಂಚೂಣಿಯಲ್ಲಿ ಕರ್ನಾಟಕ
ಸ್ವಚ್ಚ ಭಾರತ ಇಂಟರ್ ಶಿಪ್: ಮುಂಚೂಣಿಯಲ್ಲಿ ಕರ್ನಾಟಕ
ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಬೇಸಿಗೆಯಲ್ಲಿ ಸ್ವಚ್ಚ ಭಾರತ ಅಭಿಯಾನದಡಿ  ಇಂಟರ್ ಶಿಪ್ ಕಾರ್ಯಕ್ರಮಕ್ಕಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಈ ಮೂಲಕ ಅವರು ಹೆಚ್ಚುವರಿಯಾಗಿ ಎರಡು ಕ್ರೆಡಿಟ್ ಗಳನ್ನು ಪಡೆಯಬಹುದಾಗಿದೆ.
ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಕೃತ ಸುತ್ತೋಲೆಯಲ್ಲಿ ಈ ಮಾಹಿತಿ ಇದ್ದು ರಾಜ್ಯದ ಯಾವುದೇ ಪದವಿ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಮೇ ಮತ್ತು ಜುಲಯ್ ತಿಂಗಳ ನಡುವೆ 100 ಗಂಟೆಗಳ ಕಾಲ ಇಂಟರ್ ಶಿಪ್ ನಡೆಸಲಾಗುತ್ತದೆ ಕಾರ್ಯಕ್ರಮಗಳಲ್ಲಿ ನೊಂದಾಯಿಸಿಕೊಂಡ ವಿದ್ಯಾರ್ಥಿಗಳು ಆಯ್ಕೆ ಮಾಡಲಾದ  ಗ್ರಾಮಗಳಿಗೆ ತೆರಳಿ ಸ್ವಚ್ಛತೆ ಚಟುವಟಿಕೆಗಳನ್ನು ನಡೆಸಬೇಕು. ಆ ನಂತರ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜಾಲತಾಣದಲ್ಲಿ ತಮ್ಮ ಚಟುವಟಿಕೆಗಳ ಬಗ್ಗೆ ಅಪ್ ಡೇಟ್ ಮಾಡಬೇಕು.
ಯಾವ ವಿದ್ಯಾರ್ಥಿ ಸ್ವಚ್ಚ ಭಾರತ ಅಭಿಯಾನದಡಿ ಇಂಟರ್ ಶಿಪ್ ಗಳಲ್ಲಿ ಪಾಲ್ಗೊಳ್ಳುವರೋ ಅವರಿಗೆ ಹೆಚ್ಚುವರಿ ಎರಡು ಕ್ರೆಡಿಟ್ ಗಳನ್ನು ನೀಡಲು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಆಯೋಗದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಯುಜಿಸಿ ಹೊರಡಿಸಿದ ಈ ಸುತ್ತೋಲೆ ಪ್ರಕಾರ ಇದು 15 ದಿನಗಳ ಬೇಸಿಗೆ ಇಂಟರ್ ಶಿಪ್ ಕಾರ್ಯಕ್ರಮವಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ. ಆದರೂ ರಾಜ್ಯವು ಇದೇ ವರ್ಷದಿಂದ ಕಾರ್ಯಕ್ರಮ ಪ್ರಾರಂಭಕ್ಕೆ ಬಯಸಿದಲ್ಲಿ ಅದಕ್ಕೆ ಸಹ ಅವಕಾಶ ಕಲ್ಪಿಸಲಾಗಿದೆ.
"ವಿದ್ಯಾರ್ಥಿಗಳು ಕೇವಲ ಗ್ರಾಮ/ಕೊಳೆಗೇರಿನ ಸ್ವಚ್ಛತೆಯಲ್ಲಿ ಮಾತ್ರ ಪಾಲ್ಗೊಳ್ಳುವುದಲ್ಲ, ಸ್ವಚ್ಚ ಭಾರತ ಅಭಿಯಾನದಡಿ ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡುವ  ವ್ಯವಸ್ಥೆಯನ್ನು ಸ್ಥಾಪಿಸಲು ನೆರವಾಗಲಿದ್ದಾರೆ.ಈ ಪ್ರಯತ್ನಗಳು ಉತ್ತಮ ಕಲಿಕೆಯ ಅನುಭವವನ್ನು ಒದಗಲು, ಗುಣಮಟ್ಟದ ಶಿಕ್ಷಣವನ್ನು ಸುಧಾರಣೆಗಾಗಿ ಒಂದು ಪ್ರಯತ್ನ ಎನ್ನಲಾಗಿದೆ." ಸುತ್ತೋಲೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com